ದನಕ್ಕೆ ಹೊಡೆದ ವ್ಯಕ್ತಿಗೆ ಬಿತ್ತು 3 ಸಾವಿರ ರೂ. ದಂಡ! ಮುಂದೇನಾಯ್ತು ಗೊತ್ತಾ?

 

 

ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ದನಕ್ಕೆ ಹೊಡೆದ ವ್ಯಕ್ತಿಯೊಬ್ಬರಿಗೆ ಪಂಚಾಯಿತಿಯಿಂದ ಮೂರು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ!
ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮದಲ್ಲಿ ಶಂಕರಗೌಡ ಎಂಬುವವರ ತೋಟಕ್ಕೆ ದನವೊಂದು ನುಗ್ಗಿದೆ. ಅದನ್ನು ಸತೀಶ್ ಎಂಬುವವರು ಹೊಡೆದು ಓಡಿಸಿದ್ದಾರೆ. ಈ ವಿಚಾರವನ್ನು ದನದ ಮಾಲೀಕ ನವೀನ್ ಪಂಚಾಯಿತಿ ಕಟ್ಟೆಯವರೆಗೆ ಕರೆದೊಯ್ದಿದ್ದಾನೆ. ದನದ ಮೇಲೆ ಕೈ ಮಾಡಿದ್ದಕ್ಕೆ ಸತೀಶ್ ಗೆ 3 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಇದನ್ನೂ ಓದಿ । ಭದ್ರಾವತಿಯಲ್ಲಿ ಭೀಕರ ಅಪಘಾತ, ಇಬ್ಬರ ಸಾವು

ಹಲ್ಲೆ, ಠಾಣೆ ಮೆಟ್ಟಿಲೇರಿದ ಪ್ರಕರಣ | ಈ ವಿಚಾರ ಇಲ್ಲಿಗೆ ಇಲ್ಲಿಗೆ ಮುಗಿಯುವುದಿಲ್ಲ. ದಂಡ ವಿಧಿಸಿದ ನಂತರ ನವೀನ್ ಅವರು ಸತೀಶ್ ಎಂಬಾತನ ಮನೆಗೆ ಬಂದು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಸತೀಶ್ ಜೆ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ಕು ದಿನಗಳ ಗಡುವು | ದಂಡದ ಹಣವನ್ನು ನೀಡುವುದಕ್ಕೆ ಪಂಚಾಯಿತಿಯು ಸತೀಶ್ ಅವರಿಗೆ ನಾಲ್ಕು ದಿನಗಳ ಗಡುವು ನೀಡಿತ್ತು. ಆದರೆ, ಪಂಚಾಯಿತಿ ಆದ ಮಾರನೇ ದಿನವೇ ನವೀನ್ ಹಲ್ಲೆ ಮಾಡಿದ್ದಾನೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!