ಭದ್ರಾವತಿಯಲ್ಲಿ ಭೀಕರ ಅಪಘಾತ, ಇಬ್ಬರ ಸಾವು

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕಿನ ದೊಡ್ಡೇರಿ ಸಮೀಪ ಟ್ರಾಕ್ಟರ್ ಮತ್ತು ಬೈಕ್ ಮಧ್ಯ ಮಂಗಳವಾರ ರಾತ್ರಿ ಸಂಭವಿಸಿರುವ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ । ಮೂರು ದಿನಗಳ ಹಳ್ಳಿ ಥೇಟ್ರು ನಾಟಕೋತ್ಸವ, ಬುಕ್ ಮೈ ಶೋದಲ್ಲೂ ಟಿಕೆಟ್ ಲಭ್ಯ

ಭದ್ರಾವತಿಯ ಹೊಸಮನೆ ನಿವಾಸಿ ರಘು (32) ಹಾಗೂ ತರೀಕೆರೆಯ ಶಿವು (30) ಎಂಬುವವರು ಮೃತಪಟ್ಟಿದ್ದಾರೆ.

ಹೇಗೆ ನಡೀತು ಘಟನೆ | ಭದ್ರಾವತಿಯಿಂದ ಶಿವನಿ ಗ್ರಾಮಕ್ಕೆ ಹೋಗುತ್ತಿದ್ದ ಟ್ರಾಕ್ಟರ್ ಹಾಗೂ ದೊಡ್ಡೇರಿ ಗ್ರಾಮದಿಂದ ಬೈಕ್ ಮೇಲೆ ಹೋಗುತ್ತಿದ್ದ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪಿ.ಎಸ್.ಐ ದೇವರಾಜು ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.

error: Content is protected !!