ಮನೆಯಲ್ಲಿ ಕಳವು ಮಾಡಿ ಜನರ‌ ನೆಮ್ಮದಿ ಕೆಡಿಸಿದ ವ್ಯಕ್ತಿ‌ ಅರೆಸ್ಟ್, ಆತನ ಬಳಿ‌ ಸಿಕ್ತು ಲಕ್ಷಾಂತರ ಮೌಲ್ಯದ‌ ಚಿನ್ನಾಭರಣ!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮನೆಗಳಲ್ಲಿ‌ ಕಳ್ಳತನ ಮಾಡಿ‌ ಜನರ‌ ನೆಮ್ಮದಿ‌ ಕೆಡಿಸಿದ್ದ ವ್ಯಕ್ತಿಯನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಶನಿವಾರ‌ ಅರೆಸ್ಟ್ ಮಾಡಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಶಿವಮೊಗ್ಗ ನಗರದ ನಿವಾಸಿ ಮಹಮದ್ ರೋಷನ್(24) ಬಂಧಿತ ಆರೋಪಿ. 2021ನೇ ಸಾಲಿನಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ 2 ಮನೆಗಳಲ್ಲಿ ಕಳ್ಳತನ ಮಾಡಿರುವ ಪ್ರಕರಣ ದಾಖಲಾಗಿದ್ದವು.
ಕಾರ್ಯಾಚರಣೆ ತಂಡ | ಶಿವಮೊಗ್ಗ ಡಿವೈಎಸ್.ಪಿ ಪ್ರಶಾಂತ್ ಮುನ್ನೋಳಿ, ಶಿವಮೊಗ್ಗ ಗ್ರಾಮಾಂತರ ವೃತ್ತ ಸಿಪಿಐ ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್.ಐ ಮಂಜುನಾಥ್ ನೇತೃತ್ವದಲ್ಲಿ‌ ಎಎಸ್.ಐ ವಿಜಯ್ ಕುಮಾರ್ ಸಿಬ್ಬಂದಿ ಮಂಜುನಾಥ್ ಮಳಲಿ, ದನ್ಯಾ ನಾಯ್ಕ್, ಜಯ್ಯಪ್ಪ, ಎ.ಮಂಜುನಾಥ್, ಕಾಶಿನಾಥ್ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು‌ ವಶಕ್ಕೆ ಪಡೆದಿದೆ.
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜಪ್ತಿ |ಅಂದಾಜು 2.15 ಲಕ್ಷ ರೂಪಾಯಿ ಮೌಲ್ಯದ ಒಟ್ಟು 48 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

error: Content is protected !!