ಸುದ್ದಿ ಕಣಜ.ಕಾಂ
ಭದ್ರಾವತಿ: ಮೂರು ಜನ ಅಡಕೆ ಚೋರರನ್ನು ಹೊಳೆಹೊನ್ನೂರು ಪೊಲೀಸರು ಶುಕ್ರವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಇದನ್ನೂ ಓದಿ । ಚರ್ಚ್ ಎದುರು 3 ದಿನಗಳ ಧರಣಿ, ಕಾರಣವೇನು ಗೊತ್ತಾ?
ಕಾರ್ಯಾಚರಣೆ ಮಾಡಿದ ತಂಡ | ಭದ್ರಾವತಿ ಡಿವೈಎಸ್.ಪಿ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಭದ್ರಾವತಿ ಗ್ರಾಮಾಂತರ ವೃತ್ತದ ಸಿಪಿಐ ಇ.ಒ.ಮಂಜುನಾಥ್ ನೇತೃತ್ವದಲ್ಲಿ ಹೊಳೆಹೊನ್ನೂರು ಠಾಣೆ ಪಿಎಸ್.ಐ ಯೋಗೇಶ್ ಸಿಬ್ಬಂದಿ ಆನಂದ್, ಕೃಷ್ಣಮೂರ್ತಿ, ಅಣ್ಣಪ್ಪ, ಪ್ರಸನ್ನ, ದೊಡ್ಡೇಶ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಏನೇನು ವಶಕ್ಕೆ | ಬಂಧಿತರದಿಂದ 8.80 ಲಕ್ಷ ರೂಪಾಯಿ ಮೌಲ್ಯದ ಒಟ್ಟು 22 ಕ್ವಿಂಟಾಲ್ ಅಡಕೆ, ಅಂದಾಜು 1.25 ಲಕ್ಷ ರೂಪಾಯಿ ಮೌಲ್ಯದ ಕೃತ್ಯಕ್ಕೆ ಬಳಸಿದ 3 ದ್ವಿ ಚಕ್ರ ವಾಹನಗಳು ವಶಕ್ಕೆ ಪಡೆಯಲಾಗಿದೆ.