Ashraya House | ಗೋಪಿಶೆಟ್ಟಿಕೊಪ್ಪದಲ್ಲಿ 1,836 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ

Gopishettikoppa house

HIGHLIGHTS
ಗೋವಿಂದಾಪುರದಲ್ಲಿ ಈಗಾಗಲೇ 3,000 ಮನೆಗಳು ವೇಗವಾಗಿ ನಿರ್ಮಾಣವಾಗುತ್ತಿವೆ.
ಗೋಪಶೆಟ್ಟಿಕೊಪ್ಪದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ 1,836 ಮನೆಗಳ ನಿರ್ಮಾಣ

ಸುದ್ದಿ ಕಣಜ.ಕಾಂ | SHIVAMOGGA CITY | 29 SEP 2022
ಶಿವಮೊಗ್ಗ (shivamogga): ಗೋಪಶೆಟ್ಟಿಕೊಪ್ಪದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ 1,836 ಮನೆಗಳ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ‌ ಕೆ.ಎಸ್.ಈಶ್ವರಪ್ಪ ಅವರು ಗುರುವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದ ಎಲ್ಲ ಬಡವರಿಗೂ ಮನೆ ಹಂಚಿಕೆಯಾಗುತ್ತದೆ. ಆದರೆ, ಅವರು ಕಾಲ-ಕಾಲಕ್ಕೆ ನೀಡುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಆಶ್ರಯ ಯೋಜನೆ ಅಡಿ ಕಾಮಗಾರಿ ನಿಧಾನ ಗತಿ
ಆಶ್ರಯ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳು ನಿಧಾನ ಗತಿಯಲ್ಲಿ ಸಾಗುತ್ತಿರುವುದು ನಿಜ. ಆದರೆ, ಇದರಿಂದ ಬಡವರಿಗೆ ಅನುಕೂಲವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದಕ್ಕೆ ಹಣ ಕೊಡಬೇಕಾಗುತ್ತದೆ ಎಂದು ತಿಳಿಸಿದರು.
ಫಲಾನುಭವಿಗಳು ನಿಗದಿಪಡಿಸಿದ ಹಣವನ್ನು ಕಟ್ಟಬೇಕು. ಹಾಗೆ ಕಟ್ಟದೇ ಹೋದರೆ ಮನೆ ರದ್ದಾಗುವ ಸಾಧ್ಯತೆ ಇದೆ. ಯೋಜನೆ ಕೂಡ ವಿಫಲವಾಗುತ್ತದೆ. ಆದ್ದರಿಂದ ಫಲಾನುಭವಿಗಳು ಈಗ ನಿಗದಿಪಡಿಸಿದ ಮೊದಲ ಕಂತು ₹80 ಸಾವಿರ ಹಣವನ್ನು ತಕ್ಷಣ ಪಾವತಿಸಬೇಕು ಎಂದು ಹೇಳಿದರು.

ಇಲ್ಲಿ ಒಟ್ಟು 1,836 ಮನೆಗಳ ನಿರ್ಮಾಣವಾಗುತ್ತದೆ. 400 ಜನರು ಮಾತ್ರ ₹80 ಸಾವಿರ ಅಥವಾ ₹50 ಸಾವಿರ ಹಣ ಪಾವತಿಸಿದ್ದಾರೆ. ಇವರಿಗೆಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣ ಕೂಡ ಬಿಡುಗಡೆಯಾಗಿದೆ. ಮನೆಗಳ ನಿರ್ಮಾಣಕ್ಕೆ ಟೆಂಡರ್ ಕೂಡ ಕರೆಯಲಾಗಿದೆ. ಗುತ್ತಿಗೆದಾರ ಸಿದ್ಧವಾಗಿದ್ದಾರೆ. ನಾಳೆಯಿಂದಲೇ ಕಾಮಗಾರಿ ಆರಂಭವಾಗುತ್ತದೆ. ಹಣ ಕಟ್ಟದ ಫಲಾನುಭವಿಗಳು ತಕ್ಷಣ ಹಣ ಕಟ್ಟಬೇಕು.
ಸೌಲಭ್ಯಗಳಿಗಿಲ್ಲ ಕೊರತೆ
ಇಲ್ಲಿ ಈಗಾಗಲೇ ರಸ್ತೆಗಳು ಆಗಿವೆ. ಕುಡಿಯುವ ನೀರಿನ ಸರಬರಾಜು ಕೆಲಸ ನಡೆಯುತ್ತಿದೆ. ಸುಮಾರು ₹11 ಕೋಟಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕೂಡ ಕಲ್ಪಿಸಲಾಗುತ್ತಿದೆ. ಕೆಲಸ ಶೀಘ್ರವೇ ಆರಂಭಗೊಳ್ಳುತ್ತದೆ. ಎಲ್ಲ ಬಡವರಿಗೂ ಮನೆಯನ್ನು ನೀಡುವುದೇ ಸರ್ಕಾರದ ಉದ್ದೇಶವಾಗಿದೆ.
ವೇಗವಾಗಿ ಸಾಗುತ್ತಿದೆ ಮನೆ ನಿರ್ಮಾಣದ ಕೆಲಸ
ಗೋವಿಂದಾಪುರದಲ್ಲಿ ಈಗಾಗಲೇ 3,000 ಮನೆಗಳು ವೇಗವಾಗಿ ನಿರ್ಮಾಣವಾಗುತ್ತಿವೆ. ಅಲ್ಲಿ ಎಲ್ಲರೂ ಹಣ ಕಟ್ಟಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಣ ಕೂಡ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಆಶ್ರಯ ಸಮಿತಿ ಶಶಿಧರ್, ಸೂಡಾ ಅಧ್ಯಕ್ಷ ಎನ್.ಜಿ. ನಾಗರಾಜ್, ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ಈ. ವಿಶ್ವಾಸ್, ಲಕ್ಷ್ಮೀ ಶಂಕರನಾಯ್ಕ, ಮುಖಂಡ ಲಕ್ಷ್ಮಣ್ ಇದ್ದರು.

HIGHLIGHTS

  • ಗೋವಿಂದಾಪುರದಲ್ಲಿ ಈಗಾಗಲೇ 3,000 ಮನೆಗಳು ವೇಗವಾಗಿ ನಿರ್ಮಾಣವಾಗುತ್ತಿವೆ.
  • ಗೋಪಶೆಟ್ಟಿಕೊಪ್ಪದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ 1,836 ಮನೆಗಳ ನಿರ್ಮಾಣ

ಸುದ್ದಿ ಕಣಜ.ಕಾಂ | SHIVAMOGGA CITY | 29 SEP 2022
ಶಿವಮೊಗ್ಗ (shivamogga): ಗೋಪಶೆಟ್ಟಿಕೊಪ್ಪದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ 1,836 ಮನೆಗಳ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ‌ ಕೆ.ಎಸ್.ಈಶ್ವರಪ್ಪ ಅವರು ಗುರುವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದ ಎಲ್ಲ ಬಡವರಿಗೂ ಮನೆ ಹಂಚಿಕೆಯಾಗುತ್ತದೆ. ಆದರೆ, ಅವರು ಕಾಲ-ಕಾಲಕ್ಕೆ ನೀಡುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

READ | ಪಿ.ಎಫ್.ಐ ಸಿದ್ಧರಾಮಯ್ಯನವರ ಪಾಪದ ಕೂಸು, ಕಟುವಾಗಿ ಟೀಕಿಸಿದ ಯಡಿಯೂರಪ್ಪ

ಆಶ್ರಯ ಯೋಜನೆ ಅಡಿ ಕಾಮಗಾರಿ ನಿಧಾನ ಗತಿ
ಆಶ್ರಯ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳು ನಿಧಾನ ಗತಿಯಲ್ಲಿ ಸಾಗುತ್ತಿರುವುದು ನಿಜ. ಆದರೆ, ಇದರಿಂದ ಬಡವರಿಗೆ ಅನುಕೂಲವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದಕ್ಕೆ ಹಣ ಕೊಡಬೇಕಾಗುತ್ತದೆ ಎಂದು ತಿಳಿಸಿದರು.
ಫಲಾನುಭವಿಗಳು ನಿಗದಿಪಡಿಸಿದ ಹಣವನ್ನು ಕಟ್ಟಬೇಕು. ಹಾಗೆ ಕಟ್ಟದೇ ಹೋದರೆ ಮನೆ ರದ್ದಾಗುವ ಸಾಧ್ಯತೆ ಇದೆ. ಯೋಜನೆ ಕೂಡ ವಿಫಲವಾಗುತ್ತದೆ. ಆದ್ದರಿಂದ ಫಲಾನುಭವಿಗಳು ಈಗ ನಿಗದಿಪಡಿಸಿದ ಮೊದಲ ಕಂತು ₹80 ಸಾವಿರ ಹಣವನ್ನು ತಕ್ಷಣ ಪಾವತಿಸಬೇಕು ಎಂದು ಹೇಳಿದರು.
ಇಲ್ಲಿ ಒಟ್ಟು 1,836 ಮನೆಗಳ ನಿರ್ಮಾಣವಾಗುತ್ತದೆ. 400 ಜನರು ಮಾತ್ರ ₹80 ಸಾವಿರ ಅಥವಾ ₹50 ಸಾವಿರ ಹಣ ಪಾವತಿಸಿದ್ದಾರೆ. ಇವರಿಗೆಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣ ಕೂಡ ಬಿಡುಗಡೆಯಾಗಿದೆ. ಮನೆಗಳ ನಿರ್ಮಾಣಕ್ಕೆ ಟೆಂಡರ್ ಕೂಡ ಕರೆಯಲಾಗಿದೆ. ಗುತ್ತಿಗೆದಾರ ಸಿದ್ಧವಾಗಿದ್ದಾರೆ. ನಾಳೆಯಿಂದಲೇ ಕಾಮಗಾರಿ ಆರಂಭವಾಗುತ್ತದೆ. ಹಣ ಕಟ್ಟದ ಫಲಾನುಭವಿಗಳು ತಕ್ಷಣ ಹಣ ಕಟ್ಟಬೇಕು.

READ | ಚಾರ್ಲಿ 777 ನಡುವೆಯೇ ‘ಚಾಲಿ 999’ ಹವಾ! ಏನಿದು ಇಲ್ಲಿದೆ ಮಾಹಿತಿ

ಸೌಲಭ್ಯಗಳಿಗಿಲ್ಲ ಕೊರತೆ
ಇಲ್ಲಿ ಈಗಾಗಲೇ ರಸ್ತೆಗಳು ಆಗಿವೆ. ಕುಡಿಯುವ ನೀರಿನ ಸರಬರಾಜು ಕೆಲಸ ನಡೆಯುತ್ತಿದೆ. ಸುಮಾರು ₹11 ಕೋಟಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕೂಡ ಕಲ್ಪಿಸಲಾಗುತ್ತಿದೆ. ಕೆಲಸ ಶೀಘ್ರವೇ ಆರಂಭಗೊಳ್ಳುತ್ತದೆ. ಎಲ್ಲ ಬಡವರಿಗೂ ಮನೆಯನ್ನು ನೀಡುವುದೇ ಸರ್ಕಾರದ ಉದ್ದೇಶವಾಗಿದೆ.
ವೇಗವಾಗಿ ಸಾಗುತ್ತಿದೆ ಮನೆ ನಿರ್ಮಾಣದ ಕೆಲಸ
ಗೋವಿಂದಾಪುರದಲ್ಲಿ ಈಗಾಗಲೇ 3,000 ಮನೆಗಳು ವೇಗವಾಗಿ ನಿರ್ಮಾಣವಾಗುತ್ತಿವೆ. ಅಲ್ಲಿ ಎಲ್ಲರೂ ಹಣ ಕಟ್ಟಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಣ ಕೂಡ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಆಶ್ರಯ ಸಮಿತಿ ಶಶಿಧರ್, ಸೂಡಾ ಅಧ್ಯಕ್ಷ ಎನ್.ಜಿ. ನಾಗರಾಜ್, ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ಈ. ವಿಶ್ವಾಸ್, ಲಕ್ಷ್ಮೀ ಶಂಕರನಾಯ್ಕ, ಮುಖಂಡ ಲಕ್ಷ್ಮಣ್ ಇದ್ದರು.

https://suddikanaja.com/2021/06/06/gopishettikoppa-ashraya-scheme-house/

Leave a Reply

Your email address will not be published. Required fields are marked *

error: Content is protected !!