HIGHLIGHTS
- ಶೀಘ್ರವೇ ಯೂಟ್ಯೂಬ್’ನಲ್ಲಿ ಬಿಡುಗಡೆಗೊಳ್ಳಲಿದೆ ಚಾರ್ಲಿ 999
- ಪ್ರಾಣಿ, ಪಕ್ಷಿಗಳ ಬಗ್ಗೆ ಸಂದೇಶವನ್ನು ಒಳಗೊಂಡ ಕಿರುಚಿತ್ರ
ಸುದ್ದಿ ಕಣಜ.ಕಾಂ | DISTRICT | 29 SEP 2022
ಶಿವಮೊಗ್ಗ: ‘ಚಾರ್ಲಿ 777‘ ಪ್ರತಿಯೊಬ್ಬ ಶ್ವಾನಪ್ರಿಯರ ಮನಸ್ಸುಗಳಿಗೆ ಹತ್ತಿರವಾಗಿದ್ದು, ಚಿತ್ರದ ದೃಶ್ಯಗಳು ವೀಕ್ಷಕರ ಮನಸ್ಸು ಗೆದ್ದಿದೆ. ಇದರ ನಡುವೆಯೇ ‘ಚಾರ್ಲಿ 999’ ಕಿರುಚಿತ್ರ ಸದ್ದು ಮಾಡುತ್ತಿದೆ.
ಚಾರ್ಲಿ 999 ಎಂಬ ಕಿರುಚಿತ್ರವು ವೀಕ್ಷಕರ ಮನೋರಂಜನೆಗೆ ಸಿದ್ಧವಾಗಿದ್ದು, ಶೀಘ್ರವೇ ನಂ.1 ಸ್ಟುಡಿಯೋ ಯೂಟ್ಯೂಬ್ ಚಾನಲ್’ನಲ್ಲಿ ಬಿಡುಗಡೆಗೊಳ್ಳಲಿದೆ.
READ | ಅಡಿಕೆ ಬೆಳೆಗಾರರಲ್ಲಿ ಮತ್ತೆ ನಡುಕ, ಆಮದು ಸುಂಕವಿಲ್ಲದೇ ಭೂತಾನ್ ಅಡಿಕೆಗೆ ಮಣೆ, ಮುಂದೇನಾಗಲಿದೆ ಧಾರಣೆ?
ಅದ್ಭುತ ಸಂದೇಶವುಳ್ಳ ಈ ಕಿರುಚಿತ್ರದಲ್ಲಿ ರೈಸಿಂಗ್ ಸ್ಟಾರ್ ರಾಮ್, ಪುಷ್ಪಾ, ಹರಿಪ್ರಸಾದ್, ಪ್ರಕಾಶ್ ಬಾಬು, ಮುಂತಾದವರಿದ್ದಾರೆ. ಮಾರ್ವೆಲ್ ಮಾರುತಿ ಅವರ ಸಂಗೀತವಿದೆ.
ಪ್ರಾಣಿ, ಪಕ್ಷಿಗಳ ಬಗ್ಗೆ ವಿಶೇಷ ಸಂದೇಶ
ಚಾರ್ಲಿ 999 ಕಿರುಚಿತ್ರದಲ್ಲಿ ಪ್ರಾಣಿ, ಪಕ್ಷಿಗಳ ಬಗ್ಗೆ ವಿಶೇಷವಾದ ಸಂದೇಶವಿದೆ. ಕೃಷ್ಣಾ ರಿತ್ತಿ ಅವರ ನಿರ್ದೇಶನವಿದೆ. 35ಕ್ಕೂ ಹೆಚ್ಚು ಚಲನಚಿತ್ರಕ್ಕೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ವೀರ್ ಸಮರ್ಥ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿಜಿ(ಗೋವಿಂದೇ ಗೌಡ) ಅವರು ಕೂಡ ಶುಭ ಕೋರಿದ್ದಾರೆ.
https://suddikanaja.com/2020/12/24/anant-hegde-ashisar-meet-cm-bs-yadiyurappa-to-give-special-grant-to-develop-gudavi-bird-sanctuary-of-shivamogga/