ಮಾರ್ನಮಿಬೈಲಲ್ಲಿ ಝಳಪಿಸಿದ ಮಾರಕಾಸ್ತ್ರ, ಒಬ್ಬನ ಸ್ಥಿತಿ ಗಂಭೀರ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಾರ್ನಮಿಬೈಲಿನ ವೆಂಕಟೇಶ್ವರ ದೇವಸ್ಥಾನದ ಸಮೀಪ ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಗಾಯಗೊಂಡವರಲ್ಲಿ ಒಬ್ಬನು ಆರ್.ಎಂ.ಎಲ್ ನಗರ ನಿವಾಸಿ ಅವಿನಾಶ್ ಎಂದು ತಿಳಿದುಬಂದಿದೆ. ಈತನಿಗೆ ಹೆಚ್ಚು ಗಾಯಗಳಾಗಿವೆ. ಇನ್ನೊಬ್ಬನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರು ನಿಂತಿದ್ದಾಗ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

error: Content is protected !!