ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೆಲವು ಮುಸುಕುಧಾರಿಗಳು ಮಂಗಳವಾರ ಟಿಪ್ಪುನಗರದ ಮನೆಯೊಂದಕ್ಕೆ ಹೊಕ್ಕಿ ಇಬ್ಬರು ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಅದೃಷ್ಟವಷಾತ್ ಪ್ರಾಣಹಾನಿಯಾಗಿಲ್ಲ.
ಟಿಪ್ಪುನಗರದ ಸೈಯದ್ ಇಮ್ರಾನ್ ಮತ್ತು ಸೈಯದ್ ಸಾದೀಕ್ ಎಂಬ ಇಬ್ಬರು ಸಹೋದರರ ಮೇಲೆ ಹಲ್ಲೆ ಮಾಡಲಾಗಿದೆ.
ರೌಡಿಶೀಟರ್ ಜಮೀರ್ ಬಚ್ಚಾ ಎಂಬಾತ ಇಮ್ರಾನ್ ಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಹಾಗೂ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ.
ಸೋಮವಾರ ಸಂಜೆ ದೂರು ನೀಡಿದ್ದು, ಮಂಗಳವಾರ ಬೆಳಗ್ಗೆ ಹಲ್ಲೆ ಪ್ರಕರಣ ನಡೆದಿದೆ. ಬಚ್ಚಾ ಗ್ಯಾಂಗ್ ನಿಂದಲೇ ಹಲ್ಲೆ ನಡೆದಿದೆಯೋ ಅಥವಾ ಬೇರೆಯವರು ಹಲ್ಲೆ ಮಾಡಿದ್ದಾರೋ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.