ಗ್ಯಾಸ್ ಅಕ್ರಮ ಡಂಪಿಂಗ್, ರಿಫಿಲ್ಲಿಂಗ್ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್

 

 

ಸುದ್ದಿ ಕಣಜ.ಕಾಂ
ಹೊಸನಗರ: ಅಡುಗೆ ಅನಿಲವನ್ನು ಅಕ್ರಮವಾಗಿ ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಹೊಸನಗರ ತಾಲೂಕಿನ ಮೇಲಿನ ಬೆಸಿಗೆ ಗ್ರಾಮ ನಿವಾಸಿ ಕಾಂತೇಶ್ ಗೌಡ (46) ಎಂಬುವವರನ್ನು ಬಂಧಿಸಿ, ಆತನಿಂದ ಈ ಕೃತ್ಯಕ್ಕೆ ಬಳಸುತ್ತಿದ್ದ ಇಂಡೇನ್ ಕಂಪೆನಿಯ ಗೃಹ ಬಳಕೆಯ 3 ಖಾಲಿ ಸಿಲಿಂಡರ್, 2 ಗ್ಯಾಸ್ ತುಂಬಿದ ಸಿಲಿಂಡರ್, ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡಲು ಬಳಸುತ್ತಿದ್ದ 1/2 ಎಚ್.ಪಿ ಮೋಟಾರ್ ಅನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ । ಕೆರೆ ಒತ್ತುವರಿದಾರರಿಗೆ ಕಾದಿದೆ ಕಂಟಕ!

ಎರಡು ತಂಡಗಳ ಕಾರ್ಯಾಚರಣೆ | ಜಿಲ್ಲಾ ಪೊಲೀಸ್ ಕಚೇರಿಯ ಡಿ.ಎಸ್.ಬಿ. ಪಿ.ಐ. ಅವರ ತಂಡ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ನಿರೀಕ್ಷಕರ ಜಂಟಿ ನೇತೃತ್ವದ ತಂಡದಿಂದ ದಾಳಿ, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಗಳನ್ನು ಅಕ್ರಮವಾಗಿ ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಅರೆಸ್ಟ್ ಮಾಡಲಾಗಿದೆ.

ಖಚಿತ ಮಾಹಿತಿ ಮೇರೆಗೆ ಡಿಎಸ್.ಬಿ ಪೊಲೀಸ್ ನಿರೀಕ್ಷಕ ಕುಮಾರಸ್ವಾಮಿ, ಸಿಬ್ಬಂದಿ ಎಚ್.ಸಿ ಮಂಜುನಾಥ್, ಪಿ.ಸಿ. ಸಮೀವುಲ್ಲಾ ಮತ್ತು ವಸಂತ್ ಅವರನ್ನು ಒಳಗೊಂಡ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಐಬಿ ತಂಡ ಹಾಗೂ
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ನಿರೀಕ್ಷಕರಾದ ಹೊಸನಗರದ ಕವಿರಾಜ್ ಮತ್ತು ಬಾಲಚಂದ್ರ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!