ವಿದ್ಯುತ್ ಬಿಲ್, ಪವರ್ ಕಟ್ ಇತ್ಯಾದಿ ಮಾಹಿತಿ ಬೇಕೆ, ಹಾಗಾದರೆ ಎಲ್ಲದಕ್ಕೂ ಉತ್ತರ ನೀಡಲಿದೆ ‘ನನ್ನ ಮೆಸ್ಕಾಂ’!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ/ಮಂಗಳೂರು: ಗ್ರಾಹಕರು ಇನ್ಮುಂದೆ ಮೆಸ್ಕಾಂ ಸೇವೆಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ಪಡೆಯಬಹುದು!
ಹೌದು, ಇಂತಹದ್ದೊಂದು ತಂತ್ರಜ್ಞಾನಕ್ಕೆ ಮೆಸ್ಕಾಂ ಮುಂದಾಗಿದೆ. ದೂರುಗಳು, ಔಟೇಜ್ (ಪವರ್ ಕಟ್), ಟ್ಯಾರೀಫ್ (ಸದ್ಯದ ಸ್ಲ್ಯಾಬ್), ಗೂಗಲ್ ಮ್ಯಾಪ್ ಮೂಲಕ ಮೆಸ್ಕಾಂ ಕಚೇರಿ ಎಲ್ಲಿದೆ ಎಂಬುವುದನ್ನು ತಿಳಿದುಕೊಳ್ಳಬಹುದು.
ವಿದ್ಯುತ್ ಬಳಕೆಯ ಆಧಾರದ ಮೇಲೆ ಗ್ರಾಹಕರೇ ವಿದ್ಯುತ್ ಬಿಲ್ ಎಷ್ಟು ಬರಬಹುದು ಎಂಬುವುದನ್ನು ಲೆಕ್ಕ ಹಾಕಬಹುದು. ಹೊಸ ವಿದ್ಯುತ್ ಸಂಪರ್ಕಕ್ಕೋಸ್ಕರ ಸಹ ಪರದಾಡುವ ಅಗತ್ಯವಿಲ್ಲ. ಈ ಬಗ್ಗೆಯೂ ಎಲ್ಲ ಮಾಹಿತಿ ಮೆಸ್ಕಾಂ ಅಭಿವೃದ್ಧಿ ಪಡಿಸಿರುವ ತಂತ್ರಾಂಶದಲ್ಲಿ ಲಭ್ಯವಿದೆ.
ಸಚಿತ್ರ ಮುಂಜಾಗ್ರತೆ | ವಿದ್ಯುತ್ ಅವಘಡಗಳು ಸಂಭವಿಸದಂತೆ ವಹಿಸಬೇಕಾದ ಎಚ್ಚರಿಕೆ ಸೇರಿದಂತೆ ಹಲವು ಜಾಗೃತಿ ಮೂಡಿಸುವ ವಿಚಾರಗಳನ್ನು ವ್ಯಂಗ್ಯ ಚಿತ್ರಗಳ ಮೂಲಕ ಬಿತ್ತರಿಸಲಾಗಿದೆ. ಜತೆಗೆ, ವಿದ್ಯುತ್ ಉಳಿತಾಯದ ಬಗ್ಗೆಯೂ ಸಲಹೆಗಳನ್ನು ನೀಡಲಾಗಿದೆ.
ಇವೆಲ್ಲವುಗಳೊಂದಿಗೆ ಗ್ರಾಹಕರು ತಮ್ಮ ವಿದ್ಯುತ್ ಸಂಪರ್ಕದ ಬಗ್ಗೆ ಮಾಹಿತಿ ಬೇಕಾದ್ದಲ್ಲಿ ಮೆಸ್ಕಾಂ ಕಚೇರಿಗೆ ಅಲೆದಾಡಬೇಕಿತ್ತು. ಅದಕ್ಕೂ ‘ನನ್ನ ಮೆಸ್ಕಾಂ’ ತಂತ್ರಾಂಶದಲ್ಲಿ ಪರಿಹಾರ ಕಲ್ಪಿಸಲಾಗಿದೆ. ಇಲ್ಲಿ ಗ್ರಾಹಕರ ಕುರಿತಾದ ಹಳೆಯ ಮಾಹಿತಿಗಳು ಮೈ ಇನ್ಫೋದಲ್ಲಿ ಲಭ್ಯ ಇವೆ. ಕಚೇರಿಯ ದೂರವಾಣಿ ಸಂಖ್ಯೆ ಕೂಡ ನೀಡಲಾಗಿದೆ.
ಗ್ರಾಹಕ ಸ್ನೇಹಿ `ನನ್ನ ಮೆಸ್ಕಾಂ’ | ಗ್ರಾಹಕ ಸ್ನೇಹಿಯಾದ `ನನ್ನ ಮೆಸ್ಕಾಂ’ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದರಲ್ಲಿ ಗ್ರಾಹಕರಿಗೆ ಅಗತ್ಯವಿರುವ ಎಲ್ಲ ಮಾಹಿತಿಗಳು ಲಭ್ಯ ಇರುವುದರಿಂದ ಭಾರಿ ಅನುಕೂಲವಾಗಲಿದೆ.

error: Content is protected !!