ಮದ್ಯ ಮಾರಾಟಗಾರರ ಪ್ರತಿಭಟನೆ, ಕಾರಣವೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಡಿಸ್ಟ್ರಿಕ್ ವೈನ್ ಮಚೆರ್ಂಟ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಚಿಲ್ಲರೆ ಮದ್ಯ ಮಾರಾಟಗಾರರು ಮಂಗಳವಾರ ಪ್ರತಿಭಟನೆ ಮಾಡಿದರು.
ಬೇಡಿಕೆಗಳೇನು?

  • ಹೊಸ ಎಂ.ಎಸ್.ಐ.ಎಲ್. ಮಳಿಗೆಗಳನ್ನು ತೆರೆಯಬಾರದು
  • ಚಿಲ್ಲರೆ ಮದ್ಯ ಮಾರಾಟಗಾರರ ಲಾಭಾಂಶವನ್ನು ಹೆಚ್ಚಳ ಮಾಡಬೇಕು. ಆನ್‍ಲೈನ್ ಮೂಲಕ ಮಧ್ಯ ಮಾರಾಟ ಮಾಡುವ ಪ್ರಸ್ತಾಪವನ್ನು ಕೈಬಿಡಬೇಕು.
  • 2011ರ ಜನಗಣತಿ ಅನ್ವಯ 5 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆವುಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಸಿ.ಎಲ್.6ಎ ಮತ್ತು ಸಿ.ಎಲ್ 7 ಸನ್ನದುಗಳನ್ನು ಪ್ರಾರಂಭಿಸಲು ಮಾಡಿರುವ ಆದೇಶವನ್ನು ರದ್ದುಗೊಳಿಸಬೇಕು.
  • ಹೊಸ ಎಂ.ಎಸ್.ಐ.ಎಲ್. ಮಳಿಗೆಗಳನ್ನು ತೆರೆಯಬಾರದು.
  • ಕೋವಿಡ್ ಸಂದರ್ಭದಲ್ಲಿ ಲಾಕ್ ಡೌನ್ ನಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು.
  • ಅಬಕಾರಿ ಅಧಿಕಾರಿಗಳು ಸನ್ನದುದಾರರಿಗೆ ನೀಡುತ್ತಿರುವ ಕಿರುಕುಳು ಮತ್ತು ಗಂಭೀರ ತೊಂದರೆಗಳು ತಪ್ಪಬೇಕು.
  • ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕೈಬಿಡಬೇಕು.
  • ಸಿ.ಎಲ್ 2ಗಳಲ್ಲಿ ಕೂಡ ಮದ್ಯ ಸೇವಿಸಲು ಅವಕಾಶ ಕಲ್ಪಿಸಬೇಕು.
  • ಸಿ.ಎಲ್. 9 ಗಳಲ್ಲಿ ಮದ್ಯ ಪಾರ್ಸಲ್ ನೀಡಲು ಅವಕಾಶ ಕೊಡಬೇಕು.
  • ಸಾಮಾನ್ಯ ಮೊಕದ್ದಮೆಗಳಿಗೆ ನೀಡುವ ದಂಡಗಳ ಮರು ಪರಿಶೀಲನೆ ಆಗಬೇಕು. ಪೆÇಲೀಸ್ ಇಲಾಖೆಯ ಹಸ್ತಕ್ಷೇಪ ತಪ್ಪಬೇಕು. ಅನಗತ್ಯವಾಗಿ ಮದ್ಯದಂಗಡಿಗಳನ್ನು ಬಂದ್ ಮಾಡುವುದನ್ನು ನಿಲ್ಲಿಸಬೇಕು.
  • ಕಾಲ ಕಾಲಕ್ಕೆ ಅಬಕಾರಿ ಅಧಿಕಾರಿಗಳಿಗೆ ಮದ್ಯ ಮಾರಾಟ ಸಂಘದ ಪದಾಧಿಕಾರಿಗಳಿಗೆ ಕಾನೂನು ತಜ್ಞರ ಜೊತೆ ಚರ್ಚಾಗೋಷ್ಠಿ ಏರ್ಪಡಿಸಬೇಕು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಸಿ.ಎಂ.ಗೌಡ, ಟಿ.ವಿ.ಪ್ರಕಾಶ್, ರಾಜು, ಪಾಂಡುರಂಗ, ಕೃಷ್ಣಮೂರ್ತಿ, ಯೋಗೀಶ್, ಲಕ್ಷ್ಮಣ್ ಗೌಡ, ಗುಂಡಪ್ಪ ಗೌಡ, ರಂಗಸ್ವಾಮಿ, ಚೇತನ್ ಕುಮಾರ್, ಯುವರಾಜ್ ಪಾಲ್ಗೊಂಡಿದ್ದರು.

error: Content is protected !!