ಚಿನ್ನದಂಗಡಿ ಮಾಲೀಕರಿಂದ ಪೊಲೀಸರ ಮೇಲೆಯೇ ಕೇಳಿಬಂತು ಗಂಭೀರ ಆರೋಪ, ಏನದು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಚಿನ್ನದಂಗಡಿ ಮಾಲೀಕರಿಗೆ ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ವಕೀಲ ಎಂ.ರಮೇಶ್ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳ್ಳತನದ ಮಾಲು ಖರೀದಿ ಮಾಡಿರುವುದಾಗಿ ಆರೋಪಿಸಿ ಹೆದರಿಸಲಾಗುತ್ತಿದೆ. ಕೂಡಲೇ ಇಂತಹ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಯಾವುದೇ ಪ್ರಕರಣಗಳೊಂದಿಗೆ ಸಂಬಂಧವಿರದಿದ್ದರೂ ಠಾಣೆಗೆ ಕರೆದೊಯ್ದು ಕಿರುಕುಳ ನೀಡಲಾಗುತ್ತಿದೆ. ಇಂತಿಷ್ಟು ಚಿನ್ನ ಅಥವಾ ಹಣ ನೀಡಿದರೆ ಕೇಸಿನಿಂದ ಖುಲಾಸೆಗೊಳಿಸುವುದಾಗಿ ಹೇಳಲಾಗುತ್ತದೆ ಎಂದು ಆಪಾದಿಸಿದರು.
ವಕೀಲೆ ಹರ್ಷಿತಾ ರಾಣಿ, ಆರ್.ಮಂಜುನಾಥ ರಾಯ್ಕರ್, ರಘುವೀರ್ ಇನ್ನಿತರರು ಉಪಸ್ಥಿತರಿದ್ದರು.

error: Content is protected !!