ಸುಟ್ಟ ಭಸ್ಮವಾಯ್ತು ಬರೋಬ್ಬರಿ 200 ಗೇರು ಮರಗಳು

 

 

ಸುದ್ದಿ ಕಣಜ.ಕಾಂ
ಸಾಗರ: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದಪುರ ಸಮೀಪದ ನರಸೀಪುರ ಗ್ರಾಮದಲ್ಲಿ 200 ಗೇರು ಮರಗಳು ಬೆಂಕಿಗೆ ಆಹುತಿಯಾಗಿವೆ.
ಮಂಜುನಾಥ್ ಎಂಬುವವರ ಜಮೀನಿನಲ್ಲಿ ಜೋಳದ ಕೂಳೆ ಸುಡಲು ನೀಡಿದ್ದ ಬೆಂಕಿ ಪಕ್ಕದ ಹೊಲಕ್ಕೆ ವ್ಯಾಪ್ತಿಸಿ ಘಟನೆ ಸಂಭವಿಸಿದೆ.
ಘಟನೆ ನಡೆದ ಸ್ಥಳ ಜನವಸತಿ ಪ್ರದೇಶದಿಂದ ದೂರವಿರುವುದರಿಂದ ಬೆಂಕಿ ಹತ್ತಿರುವ ಬಗ್ಗೆ ಗೊತ್ತಾಗುವ ಹೊತ್ತಿಗೆ ಅಗ್ನಿಯ ಕೆನ್ನಾಲಿಗೆ ವ್ಯಾಪಿಸಿ ಗೇರಿನ ಮರಗಳು ಸುಟ್ಟು ಕರಕಲಾಗಿವೆ.
ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!