ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಆತ್ಮ ಯೋಜನೆ ಅಡಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ಸಿಬ್ಬಂದಿ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಮಾಸ್ಕ್ ಧರಿಸದವರಿಗೆ ದಂಡ, ಒಂದೇ ತಿಂಗಳಲ್ಲಿ 2.23 ಲಕ್ಷ ರೂ. ಫೈನ್, ಯಾವ ತಾಲೂಕಿನಲ್ಲಿ ಎಷ್ಟು ದಂಡ?
ಉಪ ಯೋಜನಾ ನಿರ್ದೇಶಕರು, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರುಗಳ ತಲಾ ಒಂದು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಉಪ ಯೋಜನಾ ನಿರ್ದೇಶಕರು, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಆಯ್ಕೆಯಾಗಲು ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರಬೇಕು ಹಾಗೂ ಸೇವಾನುಭವ ಇರಬೇಕು.
ಅರ್ಜಿಗಳನ್ನು ಇಲ್ಲಿಗೆ ಸಲ್ಲಿಸಿ | ಆಸಕ್ತ, ಸೂಕ್ತ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಉಪ ನಿರ್ದೇಶಕರು-1/ಯೋಜನಾ ನಿರ್ದೇಶಕರು (ಆತ್ಮ) ಇವರಿಂದ ಪಡೆದು ಸ್ವ ವಿವರಗಳೊಂದಿಗೆ ದೃಢೀಕೃತ ವಿದ್ಯಾರ್ಹತೆ ಮತ್ತು ಅನುಭವ ದಾಖಲಾತಿ ಲಗತ್ತಿಸಿ ಆಗಸ್ಟ್ 4 ರೊಳಗೆ ಉಪ ನಿರ್ದೇಶಕರು-1/ಯೋಜನಾ ನಿರ್ದೇಶಕರು (ಆತ್ಮ) ಇವರ ಕಚೇರಿ, ಹಳೇ ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ ಇಲ್ಲಿ ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-222208ಗೆ ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕ ಡಾ.ಕಿರಣ್ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಪಾರು’ ಧಾರಾವಾಹಿಯಿಂದ ಮಾನ್ಸಿ ಜೋಶಿ ಎಕ್ಸಿಟ್, ಜರ್ನಿಯ ಅನುಭವ ಇಲ್ಲಿ ಹಂಚಿಕೊಂಡಿದ್ದಾರೆ…