ಬೈಕ್ ಹಿಂಬಾಲಿಸಿಕೊಂಡು ಬಂದು ಸರಗಳ್ಳತನ, ಭದ್ರಾವತಿ ಕಡೆಯಿಂದ ಬಂದಿದ್ದ ಖದೀಮರು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಿದಿಗೆ ಹುಡ್ಕೊ ಕಾಲೊನಿ ಸಮೀಪ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯವನ್ನು ಕಿತ್ತುಕೊಂಡು ಖದೀಮರು ಪರಾರಿಯಾಗಿದ್ದಾರೆ.

ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!

ಹೊನ್ನವಿಲೆ ಮೂಲದ ಪ್ರೇಮಾ ಎಂಬುವವರೇ ಚಿನ್ನದ ತಾಳಿ ಕಳೆದುಕೊಂಡ ಮಹಿಳೆ. ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಮಲವಗೊಪ್ಪ ಕಡೆಗೆ ಬರುತ್ತಿದ್ದಾಗ ಬೈಕಿನಲ್ಲಿ ಬಂದ ಯುವಕರಿಬ್ಬರು ದ್ವಿಚಕ್ರ ವಾಹನ ಅಡ್ಡಗಟ್ಟಿ ಕೃತ್ಯ ಎಸಗಿದ್ದಾರೆ.

ಒಂದೂವರೆ ಲಕ್ಷ ರೂ. ಮೌಲ್ಯದ ಮಾಂಗಲ್ಯ ದೋಚಿ ಪರಾರಿ | ಬೈಕಿನಲ್ಲಿ ಬಂದಿದ್ದರೆನ್ನಲಾದ ಯುವಕರು ಭದ್ರಾವತಿದಿಂದ ಬಂದಿದ್ದರೆಂದು ಹೇಳಲಾಗಿದೆ. ಅಂದಾಜು 1.50 ಲಕ್ಷ ರೂಪಾಯಿ ಮೌಲ್ಯದ 44 ಗ್ರಾಂ ತೂಕದ ಮಾಂಗಲ್ಯ ಸರವನ್ನು ದೂಚಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!