ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರ ಬೇಡಿಕೆಗಳೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸರ್ಕಾರದ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು ಕರ್ನಾಟಕ ರಾಜ್ಯ ಚಾಣಕ್ಯ ಸೇನೆ ರಾಜ್ಯಧ್ಯಕ್ಷ ನಾರಾಯಣ ಐಹೊಳೆ ಒತ್ತಾಯಿಸಿದರು.
ರಾಜ್ಯದಲ್ಲಿ ಐದೂವರೆ ಲಕ್ಷ ಹೊರಗುತ್ತಿಗೆ ನೌಕರರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಹಿತ ಮನಗಾಣಬೇಕು ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಬೇಡಿಕೆಗಳೇನು?

  1. ಹೊಸದಾಗಿ ನೌಕರರ ನೇಮಕ ಮಾಡದೇ ಈಗಾಗಲೇ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವವರನ್ನೇ ಕಾಯಂಗೊಳಿಸಿ
    ಇರುವ ಹೊರಗುತ್ತಿಗೆ ನೌಕರರಿಗೆ ವಾರಕ್ಕೊಮ್ಮೆ ರಜೆ ನೀಡಬೇಕು
  2. ಹೃದ್ರೋಗ ಕಾಯಿಲೆಗಳಿಗೆ ಬೈಪಾಸ್ ಸರ್ಜರಿಯಾಗಿರುವ ರೋಗಿಗಳಿಗೆ ಸರ್ಕಾರ ಅವರ ಚಿಕಿತ್ಸೆಗೆ ಅನುಕೂಲವಾಗಲು ಪ್ರತಿ ತಿಂಗಳು 3 ಸಾವಿರ ರೂ. ಮಾಸಾಶನ ನೀಡಬೇಕು
  3. ಮುಂಬರುವ ಬಜೆಟ್‍ನಲ್ಲಿ ವಯೋವೃದ್ದರು, ಅಂಗವಿಕಲರಿಗೆ, ವಿಧವೆಯರಿಗೆ ಮಾಸಿಕ 2 ಸಾವಿರ ರೂಪಾಯಿ ಮಾಸಾಶನ ನೀಡಬೇಕು

ಮಾಧ್ಯಮಗೋಷ್ಠಿಯಲ್ಲಿ ಎಪಿಪಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೇರಿ ಸುನೀತಾ ಸಿಂಗ್, ಎಚ್.ಎನ್.ಪ್ರಭು, ಎಚ್.ಎಸ್.ನಾಗೇಂದ್ರ, ಲೋಕೇಶ್, ವಿನೋದ್ ಉಪಸ್ಥಿತರಿದ್ದರು.

error: Content is protected !!