ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ನಗರ ಉಪ ವಿಭಾಗ 2ರ ವ್ಯಾಪ್ತಿಯಲ್ಲಿನ ಘಟಕ 5 ರ ಭಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 11 ಕೆವಿ ಭೂಗತ ಕೇಬಲ್ನ ಕಾಮಗಾರಿ ಇರುವ ಕಾರಣ ಸೆಪ್ಟೆಂಬರ್ 17 ರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
READ | ಕರ್ನಾಟಕ ಹೈಕೋರ್ಟ್ ನಲ್ಲಿ ಡಿಗ್ರಿ, ಪಿಜಿ ಮುಗಿಸಿದವರಿಗೆ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಕೆಗೂ ಮುನ್ನ ಓದಿ
ಯಾವ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ನಗರದ ಗಾರ್ಡನ್ ಏರಿಯಾ ಒಂದನೇ ಕ್ರಾಸ್ ನಿಂದ 3ನೇ ಕ್ರಾಸ್ವರೆಗೆ, ಸವಾರ್ ಲೈನ್ ರಸ್ತೆ, ಎಲ್.ಎಲ್.ಆರ್ ರಸ್ತೆ, ಶಿವಪ್ಪ ನಾಯಕ ಮಾಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.