21 ಲಕ್ಷ ರೂ.ಗೆ ಹರಾಜಾದ ಗುರು ತಿಪ್ಪೇರುದ್ರಸ್ವಾಮಿ ಬ್ರಹ್ಮ ರಥೋತ್ಸವ ಮುಕ್ತಿ ಬಾವುಟ

 

 

ಸುದ್ದಿ ಕಣಜ.ಕಾಂ
ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಪುಣ್ಯ ಕ್ಷೇತ್ರವಾದ ಗುರು ತಿಪ್ಪೇರುದ್ರಸ್ವಾಮಿ ಬ್ರಹ್ಮ ರಥೋತ್ಸವದ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಪೈಪೋಟಿ ನಡೆಯಿತು.

VIDEO REPORT

ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!

ಬದುಕಲ್ಲಿ ಗೆಲುವು, ಸುಖ ಶಾಂತಿ ನೆಮ್ಮದಿಯ ಪ್ರತೀಕ ಎನಿಸಿರುವ ತಿಪ್ಪೇರುದ್ರಸ್ವಾಮಿ ಮುಕ್ತಿ ಬಾವುಟ ಹರಾಜಿನಲ್ಲಿ ಖರೀದಿಗೆ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸದಸ್ಯ ಉಮಾಪತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಗುರುಮೂರ್ತಿ ನಡುವೆ ಪೈಪೋಟಿ ನಡೆಯಿತು. ಕೊನೆಗೆ ಉಮಾಪತಿ ಅವರು 21 ಲಕ್ಷ ರೂಪಾಯಿಗೆ ಮುಕ್ತಿ ಬಾವುಟ ಹರಾಜಿನಲ್ಲಿ ಪಡೆದರು.
ಕೋವಿಡ್ ನಿಯಮ ಡೋಂಟ್ ಕೇರ್ | ಕೋವಿಡ್ ಹಿನ್ನೆಲೆ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೆ, ರಥೋತ್ಸವದಲ್ಲಿ ಇದ್ಯಾವುದಕ್ಕೂ ಕಿಮ್ಮತ್ತೇ ಇರಲಿಲ್ಲ. ಸಾಮಾಜಿಕ ಅಂತರ ಸೇರಿದಂತೆ ಎಲ್ಲವನ್ನೂ ಮರೆತು ರಥೋತ್ಸವ ಆಚರಿಸಲಾಯಿತು.

error: Content is protected !!