
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ನೂತನ ಶಾಸಕ ಎಸ್.ಎನ್.ಚನ್ನಬಸಪ್ಪ (SN Channabasappa) ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santhosh) ಅವರ ಬಗ್ಗೆ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಮಾತನಾಡಿದ್ದಾರೆ.
READ | ಕುಂಸಿ ಬಳಿ ರೈಲ್ವೆ ಹಳಿ ಪಕ್ಕದ ಚರಂಡಿಗೆ ಸಿಲುಕಿದ ಕಾಡುಕೋಣ, ಮುಂದೇನಾಯ್ತು?
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಬಿ.ಎಲ್.ಸಂತೋಷ್ ಅವರೇ ಕಾರಣರಲ್ಲ. ಹೀಗಾಗಿ, ಅವರ ಕುರಿತು ಸಾಮಾಜಿಕ ತಾಲಜಾಣಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಬಾರದು. ಪಕ್ಷದಲ್ಲಿಯೂ ಕೆಲವರು ಇಲ್ಲಸಲ್ಲದ ಆರೋಪಿಸುತ್ತಿದ್ದು, ಅಂಥವರು ಪಕ್ಷದಲ್ಲಿ ಇರಬಾರದು ಎಂದು ಹೇಳಿದರು.
ಟೀಕಿಸುವವರಿಗೆ ಎಚ್ಚರಿಕೆ ನೀಡಿದ ಚನ್ನಿ
ಸಾಮಾಜಿಕ ಜಾಲತಾಣದಲ್ಲಿ ಟೀಕಿಸುವವರನ್ನು ತರಾಟೆಗೆ ತೆಗೆದುಕೊಂಡ ಚನ್ನಿ, ” ಕೂಡಲೇ ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ನಾನು ಶಿವಮೊಗ್ಗದ ಸೇವಕ
“ಶಾಸಕ ಎಂಬ ಹೆಸರು ನಿಮಿತ್ತ ಮಾತ್ರ. ಸೇವಕ ಎಂಬುದೇ ನಿಜವಾದ ಅರ್ಥ. ನಾನು ಜನಸೇವಕನಾಗಿ ಮತದಾರರ ಋಣ ತೀರಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ” ಎಂದ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿಲ್ಲ ನಿಜ. ಬಿಜೆಪಿಗೆ ಸೋಲು ಇದೇ ಮೊದಲಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ ನಮ್ಮ ನಾಯಕರು ಈಗ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಕಾರ್ಯಕರ್ತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.
ಹಿಂದುತ್ವ- ಅಭಿವೃದ್ಧಿ ಒಟ್ಡಿಗೆ ತೆಗೆದುಕೊಂಡು ಹೋಗುವೆ
ಶಿವಮೊಗ್ಗ ನಗರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಆಗಿದೆ. ಇನ್ನೂ ಆಗಬೇಕಿದೆ. ಮುಂಬರುವ ದಿನಗಳಲ್ಲಿ ಇದರೆಡೆಗೆ ಗಮನಹರಿಸಲಾಗುವುದು. ಹಿಂದುತ್ತ ಮತ್ತು ಅಭಿವೃದ್ಧಿ ಎರಡನ್ನೂ ಒಟ್ಟಿಗೇ ತೆಗೆದುಕೊಂಡು ಹೋಗುವೆ ಎಂದರು.
ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ನಾಗರಾಜ್, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ,. ಬಾಲು, ಮೋಹನ್ ರೆಡ್ಡಿ, ಮಂಜುನಾಥ್ ಇದ್ದರು.
SN Channabasappa | ಎಸ್.ಎನ್.ಚನ್ನಬಸಪ್ಪ ಬಗ್ಗೆ ತಿಳಿದುಕೊಳ್ಳಲೇಬೇಕಾದ ನಾಲ್ಕು ಅಂಶಗಳಿವು