
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತುಂಗಾನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ತಂಡವು ಬುಧವಾರ ಸಂಜೆ ಕಾರ್ಯಾಚರಣೆ ನಡೆಸಿದ್ದು, 11 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವರ ಮೇಲೆ 8 ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ.
ತುಂಗಾನಗರ ಪಿಎಸ್ಐ ಕುಮಾರ್ ನೇತೃತ್ವದಲ್ಲಿ ಠಾಣೆ ವ್ಯಾಪ್ತಿಯ ಸೂಳೆಬೈಲು, ಮದಾರಿಪಾಳ್ಯ, ಎಂಆರ್. ಎಸ್ ವೃತ್ತ, ಪ್ರಿಯಾಂಕಾ ಲೇಔಟ್ ಮತ್ತು ವಡ್ಡಿನಕೊಪ್ಪ ಗ್ರಾಮದ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿ Public Nuisance ಮಾಡುವ ಮತ್ತು ಅನುಮಾನಸ್ಪಾದ 11 ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಅವರುಗಳ ಪೂರ್ವಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ 8 ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ.