ದೇವಾಂಗ ಸಮಾಜಕ್ಕೆ ಎಸ್.ಸಿ. ಮೀಸಲಾತಿಗಾಗಿ ಉರುಳು ಸೇವೆ ಪ್ರತಿಭಟನೆ, ಎಲ್ಲಿ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ದೇವಾಂಗ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಆಗ್ರಹಿಸಿ ಮಾರ್ಚ್ 10ರಂದು ಬೆಳಗ್ಗೆ 11 ಗಂಟೆಗೆ ಉರುಳು ಸೇವೆ ಪ್ರತಿಭಟನೆ ಮಾಡಲಾಗುವುದು.

ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ದೇವಾಂಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಈಸೂರು ಬಸವರಾಜ್ ಹೇಳಿದರು.
ನಗರದ ಶಿವಮೂರ್ತಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಉರುಳು ಸೇವೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಅತ್ಯಂತ ತಳಮಟ್ಟದಲ್ಲಿ ಬದುಕುತ್ತಿರುವ ದೇವಾಂಗ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಮಿತಿ ನೀಡಿದ್ದ 15 ದಿನದ ಗಡುವು ಪೂರ್ಣಗೊಂಡಿದೆ. ಬೇಡಿಕೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಸರ್ಕಾರ ವಿರುದ್ಧ ರಾಜ್ಯ ವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು. ಮೊದಲ ಹಂತವಾಗಿ ಜಿಲ್ಲೆಯಿಂದಲೇ ಹೋರಾಟ ಕೈಗೆತ್ತಿಕೊಳ್ಳಲಾಗಿದೆ.
ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಜನಸಂಖ್ಯೆವುಳ್ಳ ಜನಾಂಗ ಆರ್ಥಿಕವಾಗಿ ಒಂದಿಷ್ಟು ಸಬಲರು ಎನ್ನುವ ಸಂಖ್ಯೆ ಅತಿವಿರಳ. ಆದ್ದರಿಂದ ಸಮಾಜವನ್ನು ಪರಿಶಿಷ್ಟ ಜಾರಿಗೆ ಸೇರಿಸಬೇಕೆಂದು ಒತ್ತಾಯಿಸಿದರು.
ಟಿ.ಆರ್.ಪ್ರಭು ಕಲ್ಮನೆ, ಡಿ.ಟಿ.ಚಂದ್ರಶೇಖರ್, ಶೋಭಾ, ತ್ರಿವೇಣಿ, ಉಮೇಶ, ಶಂಕ್ರಮ್ಮ ಉಪಸ್ಥಿತರಿದ್ದರು.

error: Content is protected !!