ರೈತರ ಮಹಾ ಪಂಚಾಯತ್‍ಗೆ ಆಗಮಿಸಲಿದ್ದಾರೆ ಲಕ್ಷಕ್ಕೂ ಅಧಿಕ ಜನ, ಭಾಗವಹಿಸಲಿದ್ದಾರೆ 5 ಜಿಲ್ಲೆಗಳ ರೈತರು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಸೈನ್ಸ್ ಮೈದಾನದಲ್ಲಿ ಮಾರ್ಚ್ 20ರಂದು ಆಯೋಜಿಸಿರುವ ರೈತರ ಮಹಾ ಪಂಚಾಯತ್ ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಅಧಿಕ ಜನ ಆಗಮಿಸುವ ನಿರೀಕ್ಷೆ ಇದೆ ಎಂದು ರೈತ ಮುಖಂಡ ಎಚ್.ಆರ್.ಬಸವರಾಜ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಉಡುಪಿ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರಿನಿಂದ ರೈತರು ಆಗಮಿಸಲಿದ್ದಾರೆ ಎಂದು ಹೇಳಿದರು.
ಸಂಜೆ 4 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರೈತ ಸಂಘದ ರಾಷ್ಟ್ರೀಯ ಮುಖಂಡರಾದ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್, ಡಾ.ದರ್ಶನ್ ಪಾಲ್, ಜಗಮೋಹನ್ ಸಿಂಗ್ ಭಾಗವಹಿಸಲಿದ್ದಾರೆ. ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಲೋಗೋ ಬಿಡುಗಡೆ | ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಏರ್ಪಡಿಸಿರುವ ಮಹಾ ಪಂಚಾಯತ್ ಲೋಗೋ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ರೈತ ಮುಖಂಡ ಕಡಿದಾಳ್ ಶಾಮಣ್ಣ,ರೈತ ಹೋರಾಟಕ್ಕೆ ಜಯವಾಗಲಿದೆ ಎಂದರು.
ರೈತ ಮುಖಂಡ ಕೆ.ಟಿ.ಗಂಗಾಧರ್,
ಜನಶಕ್ತಿ ಸಂಘಟನೆಯ ಕೆ.ಎಲ್ ಆಶೋಕ್, ಸ್ವರಾಜ್ ಇಂಡಿಯಾ ವಕ್ತಾರ ಕೆ.ಪಿ ಶ್ರೀಪಾಲ್, ಅನನ್ಯ ಶಿವು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮುಖಂಡರಾದ ಎನ್.ರಮೇಶ್, ಎಚ್.ಸಿ.ಯೋಗೇಶ್,ವಿಶ್ವನಾಥ್ ಕಾಶಿ, ಬಿ.ಎ ರಮೇಶ್ ಹೆಗಡೆ, ಡಿ.ಎಸ್.ಎಸ್ ಮುಖಂಡ ಹಾಲೇಶಪ್ಪ, ಜೆಡಿಎಸ್ ಮುಖಂಡ ಎಚ್.ಪಾಲಾಕ್ಷಿ ಉಪಸ್ಥಿತರಿದ್ದರು.

error: Content is protected !!