ಚಲಿಸುತ್ತಿದ್ದ ವ್ಯಾನ್‍ನಲ್ಲಿ ದಿಢೀರ್ ಬೆಂಕಿ, ಆತಂಕದಲ್ಲಿ ಜನ

 

 

ಸುದ್ದಿ ಕಣಜ.ಕಾಂ
ಸಾಗರ: ಸರ್ಕಾರಿ ಆಸ್ಪತ್ರೆ ಸಮೀಪ ಓಮ್ನಿ ವ್ಯಾನ್ ವೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿದ್ದು, ಜನ ಆತಂಕಕ್ಕೀಡಾದ ಘಟನೆ ಸೋಮವಾರ ನಡೆದಿದೆ.

WhatsApp Image 2021 03 01 at 4.37.08 PMಕಾರಿನಲ್ಲಿ ಚಾಲಕನೊಬ್ಬನ್ನೇ ಇದ್ದುದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ವ್ಯಾನ್ ಗೆ ಪೆಟ್ರೋಲ್ ಹಾಕಿಸಿಕೊಂಡು ತೆರಳುವಾಗ ಘಟನೆ ನಡೆದಿದೆ.
ಓಮ್ನಿಗೆ ಬೆಂಕಿ ತಾಕಿದ ತಕ್ಷಣ ಚಾಲಕ ರಮೇಶ್ ವಾಹನದಿಂದ ಕೆಳಗಿಳಿದಿದ್ದಾರೆ. ಸ್ಥಳೀಯರು ಬೆಂಕಿಯನ್ನು ನೊಂದಿಸುವುದಕ್ಕಾಗಿ ಮುಂದೆ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.

error: Content is protected !!