ಆನ್ಲೈನ್ ನಲ್ಲಿ ಖರೀದಿ ವೇಳೆ ಹುಷಾರ್, ಗುಜರಾತ್ ಮೂಲದ ಕಂಪೆನಿಗೆ ಕ್ರೇನ್ ಗೋಸ್ಕರ 2.88 ಲಕ್ಷ ರೂ. ನೀಡಿ ಮೋಸ ಹೋದ ವ್ಯಕ್ತಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗುಜರಾತ್ ಮೂಲದ ಕಂಪೆನಿಯೊಂದರಿಂದ ಕ್ರೇನ್ ಖರೀದಿಗೋಸ್ಕರ 2.88 ಲಕ್ಷ ರೂಪಾಯಿ ಪಾವತಿಸಿ ವ್ಯಕ್ತಿಯೊಬ್ಬರು ಮೋಸ ಹೋದ ಘಟನೆ ಬಗ್ಗೆ ವರದಿಯಾಗಿದೆ.
ಮಾಚೇನಹಳ್ಳಿಯಲ್ಲಿರುವ ಕಂಪೆನಿಯೊಂದರಲ್ಲಿ ಚೇರ್ಮನ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯು ಗುಜರಾತ್ ರಾಜ್ಯದ ಅಹ್ಮದಬಾದಿನಲ್ಲಿರುವ ಕಂಪೆನಿಗೆ ಕ್ರೇನ್ ಗೋಸ್ಕರ 2020ರ ಜನವರಿ 14ರಂದು 2.88 ಲಕ್ಷ ರೂಪಾಯಿ ನೆಫ್ಟ್ ಮೂಲಕ ಪಾವತಿಸಿದ್ದಾರೆ.

ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!

ನಂತರ ಗುಜರಾತ್ ಮೂಲದ ಕಂಪೆನಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಯಾರೋ ಕರೆ ಮಾಡಿದ್ದಾರೆ. ಇನ್ನುಳಿದ ಹಣವನ್ನೂ ಪಾವತಿ ಮಾಡುವಂತೆ ತಿಳಿಸಿದ್ದಾರೆ. ಆದರೆ, ಕ್ರೇನ್ ಅನ್ನು ಕಳುಹಿಸಿದ ನಂತರವೇ ಬಾಕಿ ಹಣ ನೀಡುವುದಾಗಿ ದೂರುದಾರರು ತಿಳಿಸಿದ್ದಾರೆ. ಅದಾದ ಬಳಿಕ ಕ್ರೇನೂ ಬಂದಿಲ್ಲ. ಹಣವೂ ಹಿಂದಿರುಗಿಸಿಲ್ಲ. ಫೋನ್ ಮಾಡಿದರೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ಇಬ್ಬರು ವಿದ್ಯಾರ್ಥಿಗಳು, 1 ಸಿಬ್ಬಂದಿ ಸೇರಿ 29 ಜನರಿಗೆ ಕೊರೊನಾ

ಮೋಸ ಹೋಗಿದ್ದು ಹೇಗೆ | ನಿದಿಗೆಯ ಮಾಚೇನಹಳ್ಳಿಯಲ್ಲಿರುವ ಕಂಪೆನಿಗೆ ಬೇಕಾದ ಕ್ರೇನ್ ಯಂತ್ರವನ್ನು ಖರೀದಿಸಲು ಆನ್ಲೈನ್ ನಲ್ಲಿ ಮಾರಾಟಗಾರರನ್ನು ಹುಡುಕಿದ್ದಾರೆ. ಅಲ್ಲಿ ಗುಜರಾತ್ ಮೂಲದ ಕಂಪೆನಿಯೊಂದು ಸಿಕ್ಕಿದೆ. ವಿಚಾರಿಸಲಾಗಿ ಕ್ರೇನ್ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಅವರ ಸೂಚನೆಯಂತೆ ತಿಳಿಸಿದ್ದ ಖಾತೆಗೆ ಹಣ ಜಮೆ ಮಾಡಿದ್ದಾರೆ. ಹಣ ನೀಡಿ ಒಂದೂವರೆ ವರ್ಷವಾದರೂ ಸಂಬಂಧಪಟ್ಟ ಕಂಪೆನಿಯವರಿಂದ ಪ್ರತಿಕ್ರಿಯೆ ಸಿಗದ ಕಾರಣ ಮೋಸ ಹೋಗಿರುವುದಾಗಿ ಮನಗಂಡು ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

error: Content is protected !!