sport coach recruitment | ಕ್ರೀಡಾ ಇಲಾಖೆಯಲ್ಲಿ ತರಬೇತುದಾರರ ನೇಮಕಾತಿ, ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ಹುದ್ದೆ?

sports 1

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ(youth empowerment and sports department)ಯಲ್ಲಿ ತರಬೇತುದಾರ(coach)ರ ಹುದ್ದೆಗಳ ನೇಮಕಾತಿ( recruitment)ಗೆ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ ಆರು ಜಿಲ್ಲೆಗಳ ಕ್ರೀಡಾ ಹಾಸ್ಟೆಲ್’ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹರು ಕೂಡಲೇ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

READ | ಕೆಪಿಎಸ್‍ಸಿಯಿಂದ 105 ಸ್ಟ್ಯಾಟಿಸ್ಟಿಕಲ್ ಇನ್‍ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಪದವಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಿ

ಎಲ್ಲೆಲ್ಲಿ ಉದ್ಯೋಗ ಅವಕಾಶ?
ರಾಮನಗರ(ramanagar), ಯಾದಗಿರಿ(yadagiri), ಬಾಗಲಕೋಟೆ(Bagalakot), ಚಿಕ್ಕಬಳ್ಳಾಪುರ(chikkaballapura), ಹಾವೇರಿ (Haveri) ಮತ್ತು ಬೆಳಗಾವಿ (Belagavi) ಜಿಲ್ಲೆಗಳಲ್ಲಿ ಉದ್ಯೋಗ ಅವಕಾಶವಿದೆ. ಈ ಹುದ್ದೆಗಳ ಭರ್ತಿಯು ಕರ್ನಾಟಕ ಕ್ರೀಡಾ ಪ್ರಾಧಿಕಾರ(Karnataka Sports Authority)ದ ಮೂಲಕ ನಡೆಯಲಿದೆ. ಕ್ರೀಡಾ ತರಬೇತುದಾರರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕಾಗಿರುತ್ತದೆ.
JOBS FB Link

ನೇಮಕಾತಿ ಸಂಸ್ಥೆ ಕರ್ನಾಟಕ ಕ್ರೀಡಾ ಪ್ರಾಧಿಕಾರ
ಮಾಸಿಕ ವೇತನ 39,960 ರೂಪಾಯಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/11/2022 (ಸಂಜೆ 4ರೊಳಗೆ)
ಸಂದರ್ಶನದ ದಿನಾಂಕ 09-12-2022
ವೆಬ್‍ಸೈಟ್ ವಿಳಾಸ https://dyes.karnataka.gov.in/
ಖಾಲಿ ಇರುವ ಹುದ್ದೆಗಳ ವಿವರ
ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಹಾಕಿ ಕ್ರೀಡೆಗೆ ಪುರುಷ ತರಬೇತುದಾರರು 2
ಅಥ್ಲೆಟಿಕ್ಸ್ ತರಬೇತುದಾರರು 2
ಫುಟ್ಬಾಲ್ ತರಬೇತುದಾರರು 1
ಮಹಿಳಾ ಕುಸ್ತಿ ಮಹಿಳಾ ತರಬೇತುದಾರರು 1

ಅರ್ಜಿಗಳನ್ನು ಇಲ್ಲಿಗೆ ಕಳುಹಿಸಿ
ಅರ್ಜಿ ಸಲ್ಲಿಸಲು ಆಸಕ್ತರು ನವೆಂಬರ್ 30ರೊಳಗೆ ಸಂಜೆ 4 ಗಂಟೆಯೊಳಗೆ ಅರ್ಜಿ ಹಾಗೂ ಪೂರಕ ದಾಖಲೆಗಳೊಂದಿಗೆ ಮಹಾನಿರ್ದೇಶಕರು, ಕರ್ನಾಟಕ ಕ್ರೀಡಾ ಪ್ರಾಧಿಕಾರ, ರಾಜ್ಯ ಯುವ ಕೇಂದ್ರ, ಬೆಂಗಳೂರು ಇಲ್ಲಿಗೆ ಅರ್ಜಿ ಸಲ್ಲಿಸಬೇಕು.
ಅರ್ಹತಾ ಮಾನದಂಡಗಳು
ತರಬೇತುದಾರರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಮತ್ತು ರಾಷ್ಟ್ರೀಯ ಕ್ರೀಡಾ ಶಿಕ್ಷಣ (ಎನ್.ಎಸ್-ಎನ್.ಐ.ಎಸ್)/ ಭಾರತೀಯ ಕ್ರೀಡಾ ಪ್ರಾಧಿಕಾರ ಸಂಸ್ಥೆಯಿಂದ ಆಯಾ ಕ್ರೀಡೆಯಲ್ಲಿ ಒಂದು ವರ್ಷದ ಅವಧಿ ತರಬೇತಿಯಲ್ಲಿ ಡಿಪ್ಲೋಮಾ ಪಡೆದಿರಬೇಕು/ ಏಷಿಯನ್ ಕ್ರೀಡಾಕೂಟ ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಪಡೆದಿರಬೇಕು ಅಥವಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು.

READ | ಕೆಎಂಎಫ್’ನಲ್ಲಿ 487 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಸಂದರ್ಶನಕ್ಕೆ ಬರುವ ಮುನ್ನ ಗಮನಿಸಿ
ಡಿಸೆಂಬರ್ 9ರಂದು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮಹಾನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಈ ವೇಳೆ, ಅರ್ಜಿಯೊಂದಿಗೆ ಸಲ್ಲಿಸಲಾಗಿರುವ ದಾಖಲೆಗಳನ್ನು ನೋಟರಿ ಮಾಡಿಸಿ/ ದೃಢೀಕರಿಸಿ ಹಾಜರಾಗಬೇಕು.

CLICK HERE FOR NOTIFICATION 
ಗಮನಕ್ಕೆ- ಉದ್ಯೋಗ ಸಂಬಂಧಿಸಿದ ಮಾಹಿತಿ, ಸುದ್ದಿಗಳಿಗಾಗಿ “ಸುದ್ದಿ ಕಣಜ” ವೆಬ್ ಸೈಟ್ ಅನ್ನು ಫಾಲೋ ಮಾಡಿ. 

error: Content is protected !!