ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಿಡಿಯೋವೊಂದು ಹಲವು ವರ್ಷಗಳ ಸ್ನೇಹವನ್ನೇ ಮರೆಯುವಂತೆ ಮಾಡಿದೆ. ಮೊಬೈಲ್ನಲ್ಲಿ ಇದೆ ಎನ್ನಲಾಗಿದ್ದ ವಿಡಿಯೋಗಾಗಿ ಏಜಾಜ್ ಅಹ್ಮದ್ (52) ಎಂಬಾತ ಸ್ನೇಹಿತ ಸಮೀವುಲ್ಲಾ(57)ನ ಮೇಲೆ ಲಾಂಗಿನ ಹಿಂಬದಿಯಿಂದ ಹಲ್ಲೆ ಮಾಡಿದ್ದಾನೆ. ಗಾಯಾಳು ಸಮೀವುಲ್ಲಾಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ । ಹುಣಸೋಡು ಬ್ಲಾಸ್ಟ್ | 10ನೇ ಆರೋಪಿ ಅರೆಸ್ಟ್, ಬಂಧಿತರ ಪಟ್ಟಿ ಇಲ್ಲಿದೆ
ಆಗಿದ್ದೇನು | ಮೊಬೈಲ್ನಲ್ಲಿ ಇದೆ ಎಂದು ಹೇಳಲಾಗುತ್ತಿರುವ ವಿಡಿಯೋ ನೀಡುವಂತೆ ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಸಮೀಪ ಸಮೀವುಲ್ಲಾನನ್ನು ಕರೆಸಲಾಗಿದೆ. ಆಗ ವಿಡಿಯೋ ನೀಡುವಂತೆ ಏಜಾಜ್ ಕೇಳಿದ್ದಾನೆಂದು ತಿಳಿದುಬಂದಿದೆ. ಆದರೆ, ಯಾವುದೇ ವಿಡಿಯೋ ತನ್ನಲ್ಲಿಲ್ಲ ಎಂದಿದ್ದಕ್ಕೆ ರೊಚ್ಚಿಗೆದ್ದು ಮಚ್ಚಿನ ಹಿಂಭಾಗದಿಂದ ಹಲ್ಲೆ ಮಾಡಿದ್ದಾನೆ. ಸಮೀವುಲ್ಲಾನ ಮೂಳೆ ಮುರಿದಿದೆ ಎಂದು ತಿಳಿದುಬಂದಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.