ಬ್ಯಾಂಕ್ ಸಿಬ್ಬಂದಿ ಖಾತೆಯಿಂದಲೇ 65 ಸಾವಿರ ರೂ. ಮಾಯ, ಟೋಪಿ ಹಾಕಿದ್ದು ಹೇಗೆ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆನ್ಲೈನ್ ನಲ್ಲಿ ಮೌಸ್ ಖರೀದಿಸಿದ್ದ ವ್ಯಕ್ತಿಯೊಬ್ಬರಿಗೆ ಪ್ರತಿಷ್ಠಿತ ಕಂಪೆನಿಯೊಂದರ ಸಿಬ್ಬಂದಿ ಎಂದು ಹೇಳಿಕೊಂಡು 65,000 ರೂಪಾಯಿ ಮೋಸ ಮಾಡಲಾಗಿದೆ.

ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!

ಮೋಸ‌ಹೋದ ವ್ಯಕ್ತಿ ಬ್ಯಾಂಕ್ ವೊಂದರಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಪ್ರತಿಷ್ಠಿತ ಕಂಪೆನಿಯೊಂದರ ವೆಬ್ಸೈಟ್ ನಲ್ಲಿ ಮೌಸ್ ಬುಕಿಂಗ್ ಮಾಡಿದ್ದರು. ಹಣ ಕೂಡ ಸಂದಾಯ ಮಾಡಿದ್ದರು. ಆದರೆ, ಆರ್ಡರ್ ಬುಕಿಂಗ್ ಆಗಿರಲಿಲ್ಲ. ಇದರಿಂದಾಗಿ ಅವರು ಅದೇ ಕಂಪೆನಿಯ ಹೆಲ್ಪ್‌ ಸೆಂಟರ್‌ ಗೆ ಕಾಲ್‌ ಬ್ಯಾಕ್‌ ರಿಕ್ವೆಸ್ಟ್‌ ಕಳುಹಿಸಿದ್ದರು. ನಂತರ ಕಂಪೆನಿಯ ಹೆಸರು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಮೊಬೈಲಿಗೆ ಲಿಂಕ್‌ ಕಳುಹಿಸಿದ್ದಾರೆ.
ಲಿಂಕ್ ಭರ್ತಿ ಮಾಡಿ ಸರ್ವೇ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಅದರನ್ವಯ, ಬ್ಯಾಂಕ್ ಸಿಬ್ಬಂದಿ ಎಲ್ಲ ಸೂಚನೆಗಳನ್ನು ಚಾಚೂತಪ್ಪದೇ ಪಾಲಿಸಿದ್ದಾರೆ. ಖಾತೆಗೆ ಹಣ ಮರು ಸಂದಾಯ ಆಗುವುದಾಗಿ ಹೇಳಲಾಗಿದೆ. ಆದರೆ, ಮೂರು ದಿನಗಳ ನಂತರ ಬ್ಯಾಂಕ್‌ ಉದ್ಯೋಗಿಯ ಮೊಬೈಲ್‌ ನಂಬರ್‌ಗೆ ಹಣ ಕಡಿತವಾದ ಮೆಸೇಜ್‌ ಬಂದಿದೆ.
ಮೊದಲಿಗೆ 30 ಸಾವಿರ, ನಂತರ ಏಳು ಸಲ 5 ಸಾವಿರದಂತೆ ಬ್ಯಾಂಕ್ ಖಾತೆಯಲ್ಲಿ ಹಣ ಮಾಯವಾಗಿದೆ.
ಮೋಸ ಹೋಗಿರುವುದು ಗಮನಕ್ಕೆ ಬಂದಿದ್ದೇ ನಗರದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

https://www.suddikanaja.com/2021/03/15/fraud-case-in-cyber-crime-station/

 

 

error: Content is protected !!