ಮಾರ್ಚ್ 23ರಂದು ಈ ಪ್ರದೇಶದಲ್ಲಿ ಕರೆಂಟ್ ಇರಲ್ಲ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಬರುವ ಎ.ಎಫ್ 1, 2 ಮತ್ತು 3ರ ಫೀಡರ್‌ಗಳಲ್ಲಿ ಮಾರ್ಗ ಮುಕ್ತತೆ ಮಾಡುವ ಹಿನ್ನೆಲೆಯಲ್ಲಿ ನಗರದ ವಿವಿಧ ಪ್ರದೇಶದಲ್ಲಿ ಮಾರ್ಚ್ 23 ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಶಿವಮೊಗ್ಗ ಮೆಸ್ಕಾಂನ ನಗರ ಉಪ ವಿಭಾಗ 3ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು| ಶ್ರೀರಾಮ್ ಪುರ, ಭೂಮಿಕಾ ಇಂಡಸ್ಟ್ರೀಸ್, ಪೆಸಿಟ್ ಕಾಲೇಜು, ಕಿಮ್ಮನೆ ಗಾಲ್ಫ್ ರೆಸಾರ್ಟ್, ಹಾಲದೇವರ ಹೊಸೂರು, ಗುಡ್ಡದ ಹರಕೆರೆ, ಶಕ್ತಿ ಧಾಮ, ಪೊಲೀಸ್ ಲೇಔಟ್, ವಿರುಪಿನ ಕೊಪ್ಪ, ಸಿದ್ಲಿಪುರ, ಮುದ್ದಿನ ಕೊಪ್ಪ, ಭೋವಿ ಕಾಲೊನಿ ತ್ಯಾವರಕೊಪ್ಪ, ಸಿಂಹ ಧಾಮ, ಗುಡ್ಡದ ಹರಕೆರೆ, ವೀರಗಾರನ ಭೈರನಕೊಪ್ಪ, ಆಲ್ಕೋಳ ಸರ್ಕಲ್, ಎ.ಬಿ.ವಿ.ಪಿ ಲೇಔಟ್, ಎಸ್.ವಿ.ಬಡಾವಣೆ, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಶರಾವತಿ ದಂತ ವೈದ್ಯಕೀಯ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

error: Content is protected !!