ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ವಿವಿಧೆಡೆ ಅಪಘಾತಗಳು ಸಂಭವಿಸಿದ್ದು, ಅವುಗಳ ಪೂರ್ಣ ವಿವರ ಕೆಳಗಿದೆ.
READ | ಮಳೆ ಕುಸಿದರೂ ಲಿಂಗನಮಕ್ಕಿಯಲ್ಲಿ ನೀರಿನ ಮಟ್ಡ ಏರಿಕೆ, ಯಾವ ಜಲಾಶಯಗಳಲ್ಲಿ ಎಷ್ಟಿದೆ ನೀರು?
BHADRAVATHI: ಇನ್ನೋವಾ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಗಾಯಗೊಂಡಿದ್ದಾನೆ. ಈತನನ್ನು ಕುಮಾರ್ ಎಂದು ಗುರುತಿಸಲಾಗಿದೆ. ತರೀಕೆರೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿತ್ತು. ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.
ನಿದಿಗೆ ಬಳಿ ಸರಣಿ ಅಪಘಾತ
SHIVAMOGGA: ಗುರುವಾರ ಸಂಜೆ ನಿದಿಗೆ ಸಮೀಪ ಬಸ್, ಟ್ರಾಕ್ಸ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ. ಟ್ರಾಕ್ಸ್ ನಲ್ಲಿದ್ದ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭದ್ರಾವತಿಯಿಂದ ಶಿವಮೊಗ್ಗ ಕಡೆಗೆ ಆಗಮಿಸುತ್ತಿದ್ದ ಲಾರಿಯನ್ನು ಟ್ರಾಕ್ಸ್ ಓವರ್ ಟೇಕ್ ಮಾಡಲು ಹೋದಾಗ ಎದುರುಗಡೆ ಬರುತ್ತಿದ್ದ ಬಸ್ ಲಾರಿಗೆ ಹಾಗೂ ಟ್ರಾಕ್ಸ್ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಗಿಳಾಲಗುಂಡಿಯಲ್ಲಿ ಬಸ್ ಗಳ ಡಿಕ್ಕಿ
SAGAR: ಸಾಗರ ತಾಲೂಕಿನ ಗಿಳಾಲಗುಂಡಿ ಹತ್ತಿರ KSRTC ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಖಾಸಗಿ ಬಸ್ ಓವರ್ ಟೇಕ್ ಮಾಡಲು ಹೋದಾಗ ಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸ್ಪರ್ಧೆ ಏರ್ಪಟ್ಟಿದ್ದು, ಅವಸರದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಎರಡು ಬಸ್ನಲ್ಲಿದ್ದ ಪ್ರಯಾಣಿಕರು ಪರದಾಡಿದರು.
Homestay | ಶಿವಮೊಗ್ಗದ ಹೋಮ್ ಸ್ಡೇಗಳಿಗೆ ಮಹತ್ವದ ಸೂಚನೆ, ತಪ್ಪಿದ್ದಲ್ಲಿ ನೋಂದಣಿಯೇ ರದ್ದು