ಮೊದಲ ದಿನ ‘ರಾಬರ್ಟ್’ ಗಳಿಸಿದ್ದೆಷ್ಟು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಾದ್ಯಂತ ತೆರೆಕಂಡ ಮೊದಲ ದಿನ `ರಾಬರ್ಟ್’ ಚಿತ್ರ ಕನ್ನಡ ವರ್ಷನ್ ವೊಂದರಲ್ಲೇ ಬರೋಬ್ಬರಿ 17.24 ಕೋಟಿ ರೂಪಾಯಿ ಹಣ ಗಳಿಸಿದೆ.
ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ರಾಬರ್ಟ್’ ಚಿತ್ರವನ್ನು ಅತ್ಯಂತ ಅಭಿಮಾನದಿಂದ ವೀಕ್ಷಿಸುತ್ತಿದ್ದು, ಡಿ ಬಾಸ್ ನಟನೆಗೆ ಫಿದಾ ಆಗಿದ್ದಾರೆ.

ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!

ಆಂಧ್ರ ಮತ್ತು ತೆಲಂಗಾಣದಲ್ಲಿ ಮೊದಲ ದಿನ 3.12 ಕೋಟಿ ರೂ. ಕಲೆಕ್ಷನ್ ಆಗಿದೆ.
ಕರ್ನಾಟಕದ ಎಲ್ಲ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಇದ್ದು, ಎರಡನೇ ದಿನವೂ ಇನ್ನಷ್ಟು ಗಳಿಕೆಯಾಗುವ ಸಾಧ್ಯತೆ ಇದೆ.
ಸೋಶಿಯಲ್ ಮೀಡಿಯಾದಲ್ಲೂ ಡಿ ಬಾಸ್ ಹವಾ | ರಾಬರ್ಟ್ ಚಿತ್ರ ತೆರೆಗೂ ಮುನ್ನವೇ ಟ್ರೈಲರ್ ಹಲವರಲ್ಲಿ ಚಿತ್ರದ ಬಗ್ಗೆ ಭಾರಿ ಕೌತುಕ ಸೃಷ್ಟಿಸಿತ್ತು. ಚಿತ್ರ ತೆರೆಕಂಡ ಮೇಲೆ ದರ್ಶನ್ ಕಟೌಟ್, ಡೈಲಾಗ್ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲಾರಂಭಿಸಿವೆ. ಚಿತ್ರ ಮಂದಿರದಲ್ಲಿ ಚಿತ್ರ ವೀಕ್ಷಿಸುತ್ತಿದ್ದ ಫೋಟೊಗಳನ್ನು ಅಭಿಮಾನಿಗಳು ತಮ್ಮ ಖಾತೆಗಳಲ್ಲಿ ಶೇರ್ ಮಾಡಿಕೊಂಡು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

error: Content is protected !!