ಕಲ್ಲಹಳ್ಳಿಯಲ್ಲಿ ಸ್ಟೇಡಿಯಂ, ಕಾರ್ಪೋರೇಟರ್ ಜೊತೆ ಸಂಪರ್ಕಕ್ಕೆ ಕಟ್ಟಡ ವ್ಯವಸ್ಥೆ, ಬಜೆಟಿನಲ್ಲಿ ಶಿವಮೊಗ್ಗಕ್ಕೆ ಸಿಕ್ಕಿದ್ದೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆಯ ಆಡಳಿತರೂಢ ಬಿಜೆಪಿ ಪಕ್ಷವು ತನ್ನ ಮೂರನೇ ಅವಧಿಯ ಬಜೆಟ್ ಅನ್ನು ಬುಧವಾರ ಮಂಡಿಸಿದೆ. ಸಾರ್ವಜನಿಕರು, ಪೌರಕಾರ್ಮಿಕರಿಗೆ ಕೆಲವು ಶುಭ ಸುದ್ದಿ ನೀಡಿದೆ.
ಬಜೆಟ್ ಘೋಷಣೆಗಳು
ಪಾಲಿಕೆಯ ಡಿ-ಗ್ರೂಪ್ ನೌಕರರ ವಸತಿ ಗೃಹಕ್ಕೆ 5 ಕೋಟಿ, ಶಾಸನ ಭವನಕ್ಕೆ 5 ಕೋಟಿ, ಹುಡ್ಕೊದ ಕಲ್ಲಹಳ್ಳಿ ಪ್ರದೇಶದಲ್ಲಿ ಒಳ ಕ್ರೀಡಾಂಗಣಕ್ಕೆ 1 ಕೋಟಿ, ಶೌಚಾಲಯ ನಿರ್ಮಾಣಕ್ಕೆ 2 ಕೋಟಿ, ಗ್ರೀನ್ ಶಿವಮೊಗ್ಗ ಯೋಜನೆ ಅಡಿ 27 ಪಾರ್ಕ್‍ಗಳ ಅಭಿವೃದ್ಧಿ, ಪಾಲಿಕೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಪಡಿಸಲು 1 ಕೋಟಿ, ಪೌರ ಕಾರ್ಮಿಕರ ಕಲ್ಯಾಣ ಯೋಜನೆ 30 ಲಕ್ಷ, ವಿಮೆ ಯೋಜನೆಗಾಗಿ 50 ಲಕ್ಷ, ಪ್ಲಾಸ್ಟಿಕ್ ಮುಕ್ತ ಶಿವಮೊಗ್ಗಕ್ಕೆ 10 ಲಕ್ಷ, ವಿಶ್ವ ಮಹಿಳಾ ದಿನಾಚರಣೆಯಂದು ಸಾಧನೆಗೈದ ಮಹಿಳೆಯರಿಗೆ ತಲಾ 10 ಸಾವಿರ ರೂ.ಗಳ ಪಾರಿತೋಷಕ, ಗೋವು ಸಂರಕ್ಷಣೆ ಯೋಜನೆ ಮುಂದುವರಿಕೆ, ಮೀನು ಮತ್ತು ಮಾಂಸದ ಮಾರುಕಟ್ಟೆಗೆ 50 ಲಕ್ಷ ನಿಗದಿಪಡಿಸಲಾಗಿದೆ.

READ | ಗಲಾಟೆ, ಗದ್ದಲದ ನಡುವೆಯೇ ಪಾಲಿಕೆ 2.81 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ

ಇವುಗಳ ಜೊತೆಗೆ ಕ್ರೀಡಾ ಯೋಜನೆ, ಸ್ವಾಮಿ ವಿವೇಕಾನಂದ ಯುವ ಯೋಜನೆ, ಕೆಳದಿ ಚನ್ನಮ್ಮ ಮಹಿಳಾ ಯೋಜನೆ, ಸಾಂಸ್ಕೃತಿಕ ಸುರಕ್ಷಾ ಯೋಜನೆ, ಅಜಿತ್ ಶ್ರೀ ಸೇವಾ ಯೋಜನೆ, ಲವಕುಶ ಮಕ್ಕಳ ಯೋಜನೆ, ಪಂಡಿತ್ ದೀನದಯಾಳ್ ಹೃದಯ ಸ್ಪರ್ಶಿ ಯೋಜನೆ, ಡಾ.ಅಬ್ದುಲ್ ಕಲಾಂ ವಿಶಿಷ್ಟ ಚೇತನ ಕ್ಷೇಮಾಭಿವೃದ್ಧಿ ಮುಂದುವರಿಸಲಾಗಿದೆ.

https://www.suddikanaja.com/2021/03/02/sushasana-bhavana-in-shivamogga-for-public-grievance/

error: Content is protected !!