ಶಿವಮೊಗ್ಗದಲ್ಲಿ ಸೌತ್ ಆಫ್ರಿಕಾ ರೂಪಾಂತರ ಕೊರೊನಾ ವೈರಸ್ ಆತಂಕ, ಮೈ ಜುಮ್ಮೆನಿಸುವ ಸೋಂಕಿತನ ಟ್ರಾವೆಲ್ ಹಿಸ್ಟರಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ದುಬೈನಿಂದ ಬೆಂಗಳೂರು ಅಲ್ಲಿಂದ ಶಿವಮೊಗ್ಗಕ್ಕೆ ಬಂದಿರುವ 54 ವರ್ಷದ ವ್ಯಕ್ತಿಯೊಬ್ಬರಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಈತನ ಟ್ರಾವೆಲ್ ಹಿಸ್ಟರಿ ಮೈಜುಮ್ಮೆನಿಸುವಂತಿದೆ.

ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!

ಜೆ.ಪಿ.ನಗರ ನಿವಾಸಿ ಫೆಬ್ರವರಿ 21ರಂದು ಬೆಂಗಳೂರಿಗೆ ಹಾಗೂ ಅಲ್ಲಿಂದ ಶಿವಮೊಗ್ಗಕ್ಕೆ ಫೆಬ್ರವರಿ 22ರಂದು ಆಗಮಿಸಿದ್ದರು. ದುಬೈನಲ್ಲಿ ಉದ್ಯೋಗ ಮಾಡುತ್ತಿದ್ದ ಈತನಿಗೆ ದಕ್ಷಿಣ ಆಫ್ರಿಕಾದ ಕೊರೊನಾ ವೈರಸ್ ಸೋಂಕು ಹೇಗೆ ತಗಲಿತೆಂದು ಗೊತ್ತಾಗಿಲ್ಲ. ಆದರೆ, ದುಬೈನಿಂದ ಭಾರತಕ್ಕೆ ಬರುವಾಗ ವಿಮಾನ ಅಥವಾ ಪ್ರಯಾಣದ ವೇಳೆ ಸೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ. ಬೆಂಗಳೂರಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿಯೇ ಈತನ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ರೋಗದ ಯಾವುದೇ ಲಕ್ಷಣಗಳು ಇರಲಿಲ್ಲ. ಹೀಗಾಗಿ ಮನೆಯಲ್ಲೇ ಏಳು ದಿನ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿತ್ತು.

ಇದನ್ನೂ ಓದಿ | ಮೂವರು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಹೇಗೆ ನಡೆಯಿತು ಘಟನೆ?

17 ಬಳಿಕ ಗೊತ್ತಾಯ್ತು ಪಾಸಿಟಿವ್ ವಿಚಾರ | ಫೆಬ್ರವರಿ 21ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ನಿಯಮದನ್ವಯ ಪರೀಕ್ಷೆಗೋಸ್ಕರ ಗಂಟಲುದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಅವರು ಶಿವಮೊಗ್ಗಕ್ಕೆ ಬಂದು 17 ದಿನಗಳಾಗಿದೆ. ಬುಧವಾರ ಅವರಿಗೆ ಪಾಸಿಟಿವ್ ಇರುವ ವಿಚಾರ ಗೊತ್ತಾಗಿದೆ. ತಕ್ಷಣ ಆರೋಗ್ಯ ಇಲಾಖೆ ಸಿಬ್ಬಂದಿ ಅವರು ನೀಡಿದ್ದ ವಿಳಾಸಕ್ಕೆ ಹೋಗಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಪ್ರಸ್ತುತ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳು ಇವರಲ್ಲಿ ಕಂಡುಬಂದಿಲ್ಲ. ಸುರಕ್ಷತೆ ದೃಷ್ಟಿಯಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಕೋವಿಡ್ ವಾರ್ಡ್ ನಲ್ಲಿ ದಾಖಲಿಸಿದ್ದು, ಮತ್ತೊಮ್ಮೆ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ವರದಿ ನೆಗೆಟಿವ್ ಬಂದಿದೆ.
ಟ್ರಾವೆಲ್ ಹಿಸ್ಟರಿ | ಸೋಂಕಿತ ವ್ಯಕ್ತಿ ಶಿವಮೊಗ್ಗಕ್ಕೆ ಬಂದ ಮೇಲೆ 9 ಜನ ಪ್ರಾಥಮಿಕ ಸಂಪರ್ಕ ಮತ್ತು 30 ಜನ ದ್ವಿತೀಯ ಸಂಪರ್ಕದಲ್ಲಿರುವುದು ಗೊತ್ತಾಗಿದೆ. 9 ಜನರನ್ನು ಈಗಾಗಲೇ ಹೋಂ ಕ್ವಾರಂಟೈನ್ ಮಾಡಲಾಗಿದೆ.

ಇದನ್ನೂ ಓದಿ | ಬೋನು ಸೇರಿದ ತಿಂಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ

ಬೆಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಶಿವಮೊಗ್ಗಕ್ಕೆ ಬಂದಿರುವ 54 ವರ್ಷದ ವ್ಯಕ್ತಿಯ ಸಂಪರ್ಕದಲ್ಲಿ ಸಾಕಷ್ಟು ಜನ ಬಂದಿದ್ದಾರೆ. ಜತೆಗೆ, ಇವರ ಮನೆಯ ಪಕ್ಕದಲ್ಲೇ ಕಿರಾಣಿ ಅಂಗಡಿಯಲ್ಲಿ ವ್ಯಾಪಾರಕ್ಕೆ ಕುಳಿತಿದ್ದರು. ಹೀಗಾಗಿ, ಅಲ್ಲಿಯೂ ಸಾಕಷ್ಟು ಜನ ಸಂಪರ್ಕಕ್ಕೆ ಬಂದಿದ್ದಾರೆಂದು ತಿಳಿದುಬಂದಿದೆ. ಪ್ರಸ್ತುತ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವ ಎಲ್ಲರ ಗಂಟಲು ದ್ರವ ಪರೀಕ್ಷಿಸಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ.
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

error: Content is protected !!