ನೂತನ ಮೇಯರ್ ಆಗಿ ಸುನೀತಾ ಅಣ್ಣಪ್ಪ, ಉಪ ಮೇಯರ್ ಆಗಿ ಗನ್ನಿ ಆಯ್ಕೆ, ಪಡೆದ ಮತಗಳೆಷ್ಟು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ.

ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?

ನಿರೀಕ್ಷೆಯಂತೆ ಪಾಲಿಕೆಗೆ ಮೂರು ಸಲ ಸದಸ್ಯೆಯಾಗಿ ಆಯ್ಕೆಯಾದ ಸುನೀತಾ ಅವರು 25 ಮತ ಪಡೆದು ಮೇಯರ್ ಆದರು. ಗನ್ನಿ ಪರ 24 ಸದಸ್ಯರು ಕೈ ಎತ್ತಿ ಬೆಂಬಲ ಸೂಚಿಸಿದರು. ಈ ಮೂಲಕ ಅವರು ಉಪ ಮೇಯರ್ ಸ್ಥಾನಕ್ಕೆ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುನೀತಾ ಅಣ್ಣಪ್ಪ ಮತ್ತು ಕಾಂಗ್ರೆಸ್ಸಿನ ರೇಖಾ ಅವರು ನಾಮಪತ್ರ ಸಲ್ಲಿಸಿದ್ದರು. ಸುನಿತಾ ಪರವಾಗಿ 25 ಹಾಗೂ ರೇಖಾ ಪರವಾಗಿ 11 ಮಂದಿ ಕೈ ಎತ್ತುವ ಮೂಲಕ ಮತ ಚಲಾಯಿಸಿದರು.

ಇದನ್ನೂ ಓದಿ | ಸುನೀತಾ ಅಣ್ಣಪ್ಪ ಮೇಯರ್, ಶಂಕರ್ ಗನ್ನಿ ಉಪ ಮೇಯರ್, ಪ್ರತಿಪಕ್ಷದಿಂದಲೂ ನಾಮಪತ್ರ ಸಲ್ಲಿಕೆ, ಯಾರದ್ದೆಷ್ಟು ಬಲಾಬಲ?

ಉಪಾಧ್ಯಕ್ಷ ಸ್ಥಾನಕ್ಕೆ ಶಂಕರ್ ಗನ್ನಿ ಮತ್ತು ಆರ್.ಸಿ.ನಾಯ್ಕ್ ನಾಮಪತ್ರ ಸಲ್ಲಿಸಿದ್ದರು. ಶಂಕರ್ 24 ಹಾಗೂ ಆರ್.ಸಿ.ನಾಯ್ಕ್ ಪರ 11 ಮತ ಪಡೆದರು. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ಬಿಜೆಪಿಯ ರಾಜು ಆಗ್ರಹಿಸಿ ಉಪ ಮೇಯರ್ ಮತದಾನ ವೇಳೆ ತಟಸ್ಥರಾಗಿದ್ದರು.

ಬಿಜೆಪಿಯ 23 ಸದಸ್ಯರಿದ್ದು ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಪಕ್ಷೇತರ ಸದಸ್ಯರೊಬ್ಬರು ಬಿಜೆಪಿಯನ್ನೇ ಬೆಂಬಲಿಸಿದ್ದಾರೆ.
ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಅವರು ಚುನಾವಣೆ ನಡೆಸಿದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಉಪಸ್ಥಿತರಿದ್ದರು.

error: Content is protected !!