ಕೊರೊನಾಗೆ ಭದ್ರಾವತಿಯ ವ್ಯಕ್ತಿ ಸಾವು, ಯಾವ ತಾಲೂಕಿನಲ್ಲಿ ಎಷ್ಟು ಪ್ರಕರಣ?

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಅಟ್ಟಹಾಸ ಜಿಲ್ಲೆಯಲ್ಲಿ ಮುಂದುವರಿದಿದ್ದು, ಭದ್ರಾವತಿಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಭದ್ರಾವತಿಯ ಹುಡ್ಕೋ ಕಾಲೊನಿ ನಿವಾಸಿಯು ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟರ ಸಂಖ್ಯೆ 356ಕ್ಕೆ ತಲುಪಿದೆ.

READ | ಖಾಕಿ ಕಾರ್ಯಾಚರಣೆ, ಮಾಸ್ಕ್ ಧರಿಸದವರಿಗೆ ಒಂದೇ ದಿನ ಬಿತ್ತು 1.60 ಲಕ್ಷ ರೂ. ದಂಡ!

ಮಂಗಳವಾರ ಸಹ ಕೊರೊನಾ ಕೇಕೆ ಮುಂದುವರಿದಿದೆ. ಇಂದು 21 ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿ ಸೇರಿ‌ 239 ಜನರಿಗೆ  ಪಾಸಿಟಿವ್ ಬಂದಿದೆ. 64 ಜನರನ್ನು‌ ಬಿಡುಗಡೆ ಮಾಡಲಾಗಿದೆ.
3,006 ಜನರ ಮಾದರಿ‌ ಸಂಗ್ರಹಿಸಿದ್ದು, 2,627 ವರದಿ‌ ನೆಗೆಟಿವ್ ಬಂದಿವೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 278, ಖಾಸಗಿ ಆಸ್ಪತ್ರೆಯಲ್ಲಿ 61, ಹೋಮ್‌ ಐಸೋಲೇಷನ್‌ ನಲ್ಲಿ 639, ಹಾಗೂ 76 ಜನ ಟ್ರಿಯೇಜ್‌ ನಲ್ಲಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 1,054 ಸಕ್ರಿಯ ಪ್ರಕರಣಗಳು ಇವೆ.
ತಾಲೂಕುವಾರು‌ ವರದಿ | ಶಿವಮೊಗ್ಗ 87, ಭದ್ರಾವತಿ 7, ಶಿಕಾರಿಪುರ 29, ತೀರ್ಥಹಳ್ಳಿ 28, ಸೊರಬ 17, ಹೊಸನಗರ 18, ಸಾಗರ 46 ಹಾಗೂ ಹೊರ ಜಿಲ್ಲೆಯ ಏಳು 7 ಜನರಲ್ಲಿ ಕೊರೊನಾ‌ ಸೋಂಕು‌ ದೃಢಪಟ್ಟಿದೆ.

https://www.suddikanaja.com/2021/01/08/man-dead-due-to-covid/

error: Content is protected !!