
ಸುದ್ದಿ ಕಣಜ.ಕಾಂ ಸಾಗರ
SAGAR: ಮಾದಕ ವಸ್ತುಗಳನ್ನು ಕೊಡಲು ಬಂದಿದ್ದ ವ್ಯಕ್ತಿ ಸೇರಿ ಮೂವರನ್ನು ಬಂಧಿಸಿ, ಅವರ ಬಳಿಯಿಂದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
READ | ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಡಿಪೋ ಬಳಿ ಪೊಲೀಸರ ದಿಢೀರ್ ದಾಳಿ, ಇಬ್ಬರ ಬಂಧನ
ಮಂಗಳೂರಿನ ತೋಡಾರ್ ಗ್ರಾಮದ ನಿವಾಸಿ ಸೃಜನ್ ಎಸ್. ಶೆಟ್ಟಿ(20), ಸಾಗರದ ಅಣಲೆಕೊಪ್ಪ ನಿವಾಸಿಗಳಾದ ಮೊಹಮ್ಮದ್ ಸಮ್ಮಾನ್ ಅಲಿಯಾಸ್ ಸಲ್ಮಾನ್(24), ಶ್ರೀಧರನಗರದ ಮೊಹಮ್ಮದ್ ಯಾಸೀಫ್(25) ಎಂಬುವವರನ್ನು ಬಂಧಿಸಲಾಗಿದೆ. ₹10,000 ಮೌಲ್ಯದ 1.06 ಗ್ರಾಂ ತೂಕದ ಬಿಳಿ ಬಣ್ಣದ ಮಾದಕ ವಸ್ತುವಿನ ಪುಡಿ, ದ್ರವ ರೂಪದ ವಸ್ತುವಿದ್ದ Kings Heena 25 ಗ್ರಾಂ ಎಂಬ ಬಾಟಲಿ ಮತ್ತು Zydus Fortiza ಎಂಬ ಖಾಲಿ ಮಾತ್ರೆಯ ಶೀಟ್, 4 ಮೊಬೈಲ್ ಫೋನ್ ಗಳು, 2 ಸಿಮ್ ಕಾರ್ಡ್ ಗಳು, ₹200 ನಗದು ಮತ್ತು ಕೃತ್ಯಕ್ಕೆ ಬಳಸಿದ ಸ್ವಿಪ್ಟ್ ಡಿಸೈರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿಯನ್ವಯ ದಾಳಿ
ಮಂಗಳೂರಿನಿಂದ ಒಬ್ಬ ವ್ಯಕ್ತಿಯು ಯಾವುದೊ ಮಾದಕ ವಸ್ತುವನ್ನು ತೆಗೆದುಕೊಂಡು, ಬಸ್ಸಿನಲ್ಲಿ ಸಾಗರಕ್ಕೆ ಬಂದು ಅದನ್ನು ಅಣಲೆಕೊಪ್ಪದಲ್ಲಿರುವ ಶುಂಠಿ ಕಣದಲ್ಲಿ ನಿಲ್ಲಿಸಿರುವ ಸ್ವಿಪ್ಟ್ ಡಿಸೈರ್ ಕಾರಿನಲ್ಲಿರುವ ವ್ಯಕ್ತಿಗಳಿಗೆ ಕೊಡಲು ಬರುತ್ತಿದ್ದಾನೆಂದು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಲಾಗಿದೆ.
ಸಾಗರ ಟೌನ್ ಪೊಲೀಸ್ ಠಾಣೆ ಪಿಐ ಸೀತಾರಾಂ, ಸಾಗರ ಉಪ ವಿಭಾಗದ ಅಬಕಾರಿ ಉಪಾಧೀಕ್ಷಕ ಶಿವಪ್ರಸಾದ್, ಮತ್ತು ಪೊಲೀಸ್ ಸಿಬ್ಬಂದಿಯ ತಂಡವು ದಾಳಿ ನಡೆಸಿದೆ. ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.