
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ KSRTC ಡಿಪೋ ಹತ್ತಿರದ ಕಿಣಿ ಲೇ ಔಟ್ ಬಳಿ ಯಾರೋ ಇಬ್ಬರು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಧಿಸಲಾಗಿದೆ.
READ | ರೈತರ ವಿರೋಧದ ನಡುವೆಯೂ ಭದ್ರಾ ಡ್ಯಾಂನಿಂದ ಎರಡು ಟಿಎಂಸಿ ನೀರು ಹರಿಸಲು ಗ್ರೀನ್ ಸಿಗ್ನಲ್
ಭರಮಪ್ಪ ನಗರದ ಮೊಹಮ್ಮದ್ ಆರೀಸ್(22) ಸೇರಿದಂತೆ 19 ವರ್ಷದ ಮತ್ತೊಬ್ಬನನ್ನು ಬಂಧಿಸಲಾಗಿದೆ. ಆರೋಪಿತರಿಂದ ಅಂದಾಜು ₹38,000 ಮೌಲ್ಯದ ಒಟ್ಟು 580 ಗ್ರಾಂ ತೂಕದ ಒಣ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಇವರ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆ ಅಡಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಶಿವಮೊಗ್ಗ ಎ ಉಪ ವಿಭಾಗದ ಡಿವೈಎಸ್.ಪಿ ಬಾಲರಾಜು ನೇತೃತ್ವದಲ್ಲಿ ದೊಡ್ಎಒಏಟೆ ಠಾಣೆಯ ಪಿಎಸ್ಐ ವಸಂತ್ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.