ರಾಜ್ಯದಲ್ಲಿ ಮಾದಕ ಸಾಗಣೆ, ಮಾರಾಟ 8505 ಪ್ರಕರಣ ದಾಖಲು

Araga jnanendra

 

 

ಸುದ್ದಿ ಕಣಜ.ಕಾಂ | KARNATAKA | DRUG
ಶಿವಮೊಗ್ಗ: ರಾಜ್ಯದಲ್ಲಿ ಮಾದಕ ವಸ್ತುಗಳ ಸೇವನೆ, ಮಾರಾಟ ಹಾಗೂ ಕಳ್ಳ ಸಾಗಾಣಿಕೆ ವಿರುಧ್ದ ರಾಜ್ಯ ಸರಕಾರ ಕಠಿಣ ಕ್ರಮ ಜರುಗಿಸುತ್ತಿದ್ದು, ಅಭಿಯಾನದ ರೂಪದಲ್ಲಿ ಪಿಡುಗಿನ ವಿರುದ್ಧ ಹೋರಾಟ ನಡೆಸಲು, ಸಮಾಜದ ಎಲ್ಲಾ ವರ್ಗದ ಜನತೆ, ಕೈ ಜೋಡಿಸಬೇಕು, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ವರ್ಷ ಸುಮಾರು 8505 ಮೊಕದ್ದಮೆ ಗಳನ್ನು ದಾಖಲಿಸಿ, ಕೋಟ್ಯಾಂತರ ರೂಪಾಯಿ ಮೌಲ್ಯದ ಮಾದದ್ರವ್ಯ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ, ಎಂದರು
ಕಳೆದ 12 ತಿಂಗಳ ಅವಧಿಯಲ್ಲಿ ಒಟ್ಟು 7846 ಮಂದಿಯನ್ನು ಬಂಧಿಸಲಾಗಿದೆ ಎಂದೂ ತಿಳಿಸಿದ ಸಚಿವರು, ವಶಪಡಿಸಿಕೊಳ್ಳಲಾದ ಮಾದಕ ದ್ರವ್ಯ ಸರಕನ್ನು, ನ್ಯಾಯಾಲಯದಿಂದ ಅನುಮತಿ ಪಡೆದು, ನಾಶ ಪಡಿಸಲಾಗುವುದು ಎಂದರು.
ದೇಶದೊಳಕ್ಕೆ ಮಾದಕ ದ್ರವ್ಯ ವಸ್ತುಗಳನ್ನು ಅಕ್ರಮವಾಗಿ ಸಾಗಿಸಿ, ದೇಶದ ಯುವ ಜನತೆಯನ್ನು ಗುರಿ ಮಾಡಿಕೊಂಡು, ಸಮಾಜವನ್ನು ದುರ್ಬಲಗೊಳಿಸುವ ಹುನ್ನಾರ ಇದೆ, ಎಂದು ಎಚ್ಚರಿಸಿದ ಗೃಹ ಸಚಿವರು, ರಾಜ್ಯ ಗೃಹ ಇಲಾಖೆ ಮಾದಕ ವಸ್ತುಗಳ ವಿರುಧ್ದ ಜನ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದೆ ಎಂದರು.

https://suddikanaja.com/2021/08/24/celebity-ganja-case-report-came-from-lab/

Leave a Reply

Your email address will not be published. Required fields are marked *

error: Content is protected !!