ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೇಂದ್ರ ನಗರಾಭಿವೃದ್ಧಿ ಮತ್ತು ವಸತಿ ಸಚಿವಾಲಯವು ಇಂಡಿಯಾ ಸ್ಮಾರ್ಟ್ ಸಿಟೀಸ್ ಅವಾರ್ಡ್ ಕಾಂಟೆಸ್ಟ್ (ಐಎಸ್‌ಎಸಿ) India Smart Cities Awards Contest (ISAC) ಫಲಿತಾಂಶ ಬಿಡುಗಡೆ ಮಾಡಿದೆ. ಈ ಸಲವೂ ಮಧ್ಯಪ್ರದೇಶದ ಇಂದೋರ್ ಮೊದಲ ಸ್ಥಾನ ಗಳಿಸಿದೆ. ಶಿವಮೊಗ್ಗ ಸೇರಿ ರಾಜ್ಯದ ಮೂರು ನಗರಗಳಿಗೆ ಪ್ರಶಸ್ತಿ ಲಭಿಸಿದೆ.
READ | ಯಾರು ರಕ್ತದಾನ ಮಾಡಬಹುದು? ಯಾರು ಮಾಡುವಂತಿಲ್ಲ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ದೇಶದ 100 ಸ್ಮಾರ್ಟ್ ಸಿಟಿಗಳ ಪೈಕಿ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡಿದ್ದು, ಎರಡನೇ ಸ್ಥಾನವನ್ನು ಗುಜರಾತಿನ ಸೂರತ್, ಮೂರನೇ ಸ್ಥಾನವನ್ನು ಉತ್ತರಪ್ರದೇಶದ ಆಗ್ರಾ ಗಳಿಸಿದೆ.
ರಾಜ್ಯದ ಯಾವ್ಯಾವ ನಗರಗಳಿಗೆ ಪ್ರಶಸ್ತಿ?
ಶಿವಮೊಗ್ಗ ನಗರಕ್ಕೆ ನಗರ ಪರಿಸರ ಅಭಿವೃದ್ಧಿ ವಿಭಾಗದಲ್ಲಿ ಕನ್ಸರ್ವೆನ್ಸಿಗಳ ಅಭಿವೃದ್ಧಿ ಪ್ರಶಸ್ತಿ ಸಿಕ್ಕಿದೆ. ಅದೇ ರೀತಿ, ಹುಬ್ಬಳ್ಳಿ-ಧಾರವಾಡಕ್ಕೆ ಇನ್ನೋವೇಟಿಂಗ್ ಇಂಡಿಯಾ ಪ್ರಶಸ್ತಿಗೆ ಒಳಚರಂಡಿ ನವೀಕರಣ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ದಕ್ಷಿಣ ವಲಯದಲ್ಲಿ ಝೋನಲ್ ಬೆಸ್ಟ್ ಸ್ಮಾರ್ಟ್ ಸಿಟಿ ಪ್ರಶಸ್ತಿಗೆ ಬೆಳಗಾವಿ ಆಯ್ಕೆಯಾಗಿದೆ.
Indian Audit dept | ಭಾರತೀಯ ಲೆಕ್ಕಪತ್ರ ಇಲಾಖೆಯಲ್ಲಿ 1773 ಹುದ್ದೆಗಳ ನೇಮಕ, ಅಧಿಸೂಚನೆಯಲ್ಲಿ ಏನಿದೆ?