ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ(Indian Audit And Accounts Department Recruitment)ಯಲ್ಲಿ 1773 ಹುದ್ದೆಗಳ ನೇಮಕ ನೇಮಕಾತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಕ್ಷೇಪಣೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 19ರಂದು ಸಲ್ಲಿಸಬಹುದಾಗಿದೆ.
READ | KPSC ಯಿಂದ ರೇಷ್ಮೆ ವಿಸ್ತರಣಾಧಿಕಾರಿ ಹುದ್ದೆಗಳ ಪರೀಕ್ಷೆ, ಪರೀಕ್ಷಾರ್ಥಿಗಳು ಗಮನಿಸಿಬೇಕಾದ ಅಂಶಗಳಿವು
ನೇಮಕಾತಿ ಪ್ರಾಧಿಕಾರ- ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ
ಹುದ್ದೆ ಹೆಸರು- ಆಡಳಿತ ಸಹಾಯಕ
ಹುದ್ದೆಗಳ ಸಂಖ್ಯೆ- 1773
ಆಕ್ಷೇಪಣೆ ಸಲ್ಲಿಸಲು ಕೊನೆ ದಿನ– 17 ಸೆಪ್ಟೆಂಬರ್ 2023
ನೇಮಕಾತಿ ವಿಧಾನ- ನೇರ ನೇಮಕಾತಿ
ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸ– https://cag.gov.in/en/page-cag-of-india
ಕರಡು ಪ್ರತಿ ಬಿಡುಗಡೆ
ಇಲಾಖೆಯಲ್ಲಿ ಖಾಲಿ ಇರುವ ಆಡಳಿತ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಅರ್ಜಿ ಸಲ್ಲಿಸುವವರು ಪದವಿ ಉತ್ತೀರ್ಣರಾದವರು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರತಕ್ಕದ್ದು. ಕನಿಷ್ಠ 18 ಹಾಗೂ ಗರಿಷ್ಠ 25 ವಯೋಮಿತಿ ವಿಧಿಸಲಾಗಿದೆ. ಎರಡು ವರ್ಷ ಪ್ರೊಬೇಷನ್ ಅವಧಿ ಇರುತ್ತದೆ. ಆಕ್ಷೇಪಣೆಗಳಿದ್ದಲ್ಲಿ ಸ್ಪೀಡ್ ಪೋಸ್ಟ್ ಮೂಲಕ “ಶ್ರೀ ನಿಲೇಶ್ ಪಾಟಿಲ್, ಅಸಿಸ್ಟಂಟ್, ಸಿ&ಎಜಿ (ಎನ್)-I, O/o ಸಿ&ಎಜಿ ಆಫ್ ಇಂಡಿಯಾ, 9, ದೀನ್ ದಯಾಲ್ ಉಪಧ್ಯಾಯ ಮಾರ್ಗ್, ನವದೆಹಲಿ – 110124” ಈ ವಿಳಾಸಕ್ಕೆ ಕಳುಹಿಸಬಹುದು.