ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೊಳ್ಳೆಗಳ (Mosquitoes) ಕಾಟ ಮನೆಯಲ್ಲಿ ಹೆಚ್ಚಿದೆಯೇ? ಎಷ್ಟೇ ಪ್ರಯತ್ನಿಸಿದರೂ ಕಡಿವಾಣ ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ, ಇಲ್ಲಿ ನೀಡಿರುವ ಟಿಪ್ಸ್ ಗಳನ್ನು ಫಾಲೋ ಮಾಡಿ. ಜೊತೆಗೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ.
READ | 9, 10ನೇ ಮಕ್ಕಳಿಗೂ ಬೇಯಿಸಿದ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ
ಮುಂಜಾಗ್ರತಾ ಕ್ರಮಗಳು
- ಸಂಜೆ ಮತ್ತು ಬೆಳಗ್ಗೆ ಸಮಯದಲ್ಲಿ ಸೊಳ್ಳೆಗಳು ಹೆಚ್ಚು ಸಕ್ರಿಯಗೊಂಡು ಕಚ್ಚುತ್ತವೆ. ಹೀಗಾಗಿ, ಹಚ್ಚಿನ ಪ್ರಮಾಣದಲ್ಲಿ ಕಾಯಿಲೆ ಹರಡುವ ಸಾಧ್ಯತೆಗಳು ಇವೆ ಎಂದು ಕಾಯಿಲೆ ನಿಯಂತ್ರಣ ಕೇಂದ್ರ(ಸಿಡಿಸಿ) ತಿಳಿಸಿಳಿದೆ. ಈ ವೇಳೆ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು. ಅದರಲ್ಲೂ ಮಕ್ಕಳನ್ನು ಜಾಗೃತವಾಗಿ ಕಾಪಾಡಬೇಕು. ಮೈತುಂಬ ಬಟ್ಟೆ ಉಟ್ಟರೆ ಬೆಸ್ಟ್ ಎಂದು ತಜ್ಞರು ‘ಸುದ್ದಿ ಕಣಜ’ಕ್ಕೆ ತಿಳಿಸಿದ್ದಾರೆ.
- ಶಾರ್ಟ್ಸ್ ಧರಿಸುವುದು ಬೇಡ. ಅದರ ಬದಲು ಉದ್ದ ಕೈಗಳ ಅಂಗಿ, ಪ್ಯಾಂಟ್, ತಲೆಗೆ ಟೋಪಿ ಮತ್ತು ಕಾಲಿಗೆ ಸಾಕ್ಸ್ ಹಾಕಿಕೊಳ್ಳಿ. ಶೂ ಧರಿಸುವುದು ಉತ್ತಮ.
- ಸೊಳ್ಳೆಗಳ ಉತ್ಪತ್ತಿ ಕೇಂದ್ರವೇ (mosquitoes breeding center) ನೀರು ನಿಲ್ಲುವ ತಾಣ. ಹೀಗಾಗಿ, ಹಳೆಯ ಟೈಯರ್, ಹೆಂಚು, ಮನೆಯ ಮುಂದಿನ ಗುಂಡಿ, ಹೂ ಕುಂಡ ಇವುಗಳ ಬಗ್ಗೆ ಗಮನವಿರಲಿ.
ಸೊಳ್ಳೆ ಕಂಟ್ರೋಲಿಗೆ ಟಿಪ್ಸ್
- ಸ್ವಲ್ಪ ಬೇವಿನ ಎಣ್ಣೆ ಜೊತೆ ತೆಂಗಿನ ಎಣ್ಣೆ ಮಿಶ್ರಣ ಮಾಡಬೇಕು. ಅದನ್ನು ಲೇಪಿಸಿದರೆ ಎಂಟು ಗಂಟೆ ಸೊಳ್ಳೆಗಳನ್ನು ದೂರವಿಡಬಹುದು.
- ಮನೆಯ ಕೊಠಡಿಯ ಬಾಗಿಲುಗಳನ್ನು ಮುಚ್ಚಬೇಕು. ನಂತರ, ಕರ್ಪೂರ ಹಚ್ಚಬೇಕು. ಇದರಿಂದಲೂ ಸೊಳ್ಳೆಗಳು ಪರಾರಿಯಾಗುತ್ತವೆ. ಜೊತೆಗೆ, ಉತ್ತಮ ವಾತಾವರಣವೂ ಸೃಷ್ಟಿಯಾಗುತ್ತದೆ.
- ಸೊಳ್ಳೆಗಳು ಮನೆಗೆ ಪ್ರವೇಶಿಸುವುದೇ ಕಿಟಕಿಗಳಿಂದ. ಅವುಗಳಿಗೆ ಪರದೆ ಇರದಿದ್ದರಂತೂ ಇನ್ನೂ ಕಷ್ಟ. ಹೀಗಾಗಿ, ಕಿಟಕಿ ಬಳಿ ತುಳಸಿ (Tulsi) ಗಿಡವನ್ನು ಬೆಳೆಸಬೇಕು. ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಗೆ ತಡೆಯೊಡ್ಡಬಹುದು.
- ತುಳಸಿ (Rulsi), ಕಹಿಬೇವು ಈ ಗಿಡಗಳು ಗಾಳಿಯನ್ನು ಶುದ್ಧಗೊಳಿಸುತ್ತವೆ. ಅಲ್ಲದೇ ಈ ಗಿಡಗಳ ವಾಸನೆಯಿಂದಲೇ ಸೊಳ್ಳೆಗಳು ಬರುವುದಿಲ್ಲ. ಈ ನೈಸರ್ಗಿಕ ವಿಧಾನ ಸಹಕಾರಿ.
- ಸುವಾಸನೆ ಬೀರುವ ಲ್ಯಾವೆಂಡರ್ (lavender) ಸೊಳ್ಳೆಗಳನ್ನೂ ನಿಯಂತ್ರಿಸುತ್ತದೆ. ಇದನ್ನು ಕೋಣೆಯಲ್ಲಿ ಸಿಂಪಡಿಸಿದರೆ ಸೊಳ್ಳೆಗಳನ್ನು ಗೇಟ್ ಪಾಸ್ ಮಾಡಬಹುದು. ಕೋಣೆಯಷ್ಟೇ ಅಲ್ಲ ಕ್ರೀಮ್ (Cream)ನೊಂದಿಗೆ ಮೈಮೇಲೆ ಲೇಪಿಸಿಕೊಂಡರೆ ಸೊಳ್ಳೆಗಳು ದೂರವಾಗುತ್ತವೆ.
- ಬೆಳ್ಳುಳ್ಳಿ ಅಡುಗೆಯಷ್ಟೇ ಅಲ್ಲದೇ ಆರೋಗ್ಯಕ್ಕೂ ಪೂರಕ. ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಬೆಳ್ಳುಳ್ಳಿ ಎಣ್ಣೆಯಿಂದ ಸೊಳ್ಳೆಗಳು ಹತ್ತಿರ ಸುಳಿಯದಂತೆ ಮಾಡಬಹುದು. ಪರಿಶುದ್ಧ ಬೆಳ್ಳುಳ್ಳಿ ಎಣ್ಣೆಯನ್ನು ಚರ್ಮದ ಮೇಲೆ ಲೇಪಿಸಿಕೊಳ್ಳಿ. ಮ 20 ನಿಮಿಷ ಸೊಳ್ಳೆ ಕಾಟ ಇರಲ್ಲ. ಆದರೆ, ಇದರ ಘಾಟು ಮಾತ್ರ ಸಹಿಸಿಕೊಳ್ಳಲೇಬೇಕು.
- ಸೋಯಾಬೀನ್ ನಿಂದ ಸಿದ್ಧಪಡಿಸುವ ಎಣ್ಣೆಯು (oil) ರಕ್ಷಣೆ ನೀಡುತ್ತದೆ. ಸುಮಾರು ಒಂದೂವರೆ ಗಂಟೆ ಸೊಳ್ಳೆ ಸುಳಿಯುವುದಿಲ್ಲ.