ಮಧ್ಯಾಹ್ನ 1 ಗಂಟೆಯವರೆಗೆ ಭದ್ರಾವತಿಯಲ್ಲಿ ಭಾರಿ ಕಡಿಮೆ, ತೀರ್ಥಹಳ್ಳಿಯಲ್ಲಿ ಉತ್ತಮ ಮತದಾನ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ ನಗರ ಸಭೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಭದ್ರಾವತಿಯಲ್ಲಿ ಭಾರಿ ಕಡಿಮೆ ಮತದಾನವಾಗಿದೆ. ಆದರೆ, ತೀರ್ಥಹಳ್ಳಿಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಉತ್ತಮ ಮತದಾನ ನಡೆದಿದೆ.

READ | ಭದ್ರಾವತಿ, ತೀರ್ಥಹಳ್ಳಿಯಲ್ಲಿ ಮಂದಗತಿಯ ಮತದಾನ, ಬೆಳಗ್ಗೆ 11 ಗಂಟೆಯವರೆಗೆ ಆದ ಮತದಾನವೆಷ್ಟು ಗೊತ್ತಾ?

ಭದ್ರಾವತಿಯಲ್ಲಿ ಒಟ್ಟು 1,22,974 ಮತಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ 44,661 (ಶೇ.36.32) ಮತಗಳ ಚಲಾವಣೆ ಆಗಿದೆ. ಅದರಲ್ಲಿ 21,300 ಪುರುಷರು ಮತ್ತು 44,661 ಮಹಿಳೆಯರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

READ | ‘ರೆಮಿಡಿಸಿವರ್ ಪಡೆದವರೆಲ್ಲ ಬದುಕುತ್ತಾರೆಂಬ ಭ್ರಮೆ ಬೇಡ, ಶಿವಮೊಗ್ಗದಲ್ಲಿ ಈ ಇಂಜೆಕ್ಷನ್ ತೆಗೆದುಕೊಂಡ ಹಲವರು ಮೃತಪಟ್ಟಿದ್ದಾರೆ’

ಅದೇ ತೀರ್ಥಹಳ್ಳಿಯಲ್ಲಿ 11,845 ಮತಗಳಲ್ಲಿ 6,044 (ಶೇ.51.03) ಮತದಾನವಾಗಿದೆ. ಅದರಲ್ಲಿ 2,910 ಪುರುಷರು ಮತ್ತು 6,044 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

error: Content is protected !!