ಭದ್ರಾವತಿಯಲ್ಲಿ ಕೊರೊನಾ ಮಹಾಸ್ಫೋಟ, ಒಂದೇ ದಿ‌ನ 124 ಜನರಿಗೆ ಸೋಂಕು

 

 

ಸುದ್ದಿ ಕಣಜ‌.ಕಾಂ
ಶಿವಮೊಗ್ಗ: ಶುಕ್ರವಾರವೊಂದೇ ದಿನ ಭದ್ರಾವತಿಯಲ್ಲಿ‌ 41 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಜಿಲ್ಲೆಯಲ್ಲಿ ಒಟ್ಟು 124 ಜನರಿಗೆ ಸೋಂಕು ತಗಲಿದೆ. 50 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮತ್ತೊಂದು‌ ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 353ಕ್ಕೆ ಏರಿಕೆಯಾಗಿದೆ.

ಭದ್ರಾವತಿ ತಾಲೂಕಿನ ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮವೊಂದರಲ್ಲೇ‌ ಇಪ್ಪತ್ತಕ್ಕೂ‌ ಅಧಿಕ‌ ಜನರಿಗೆ ಪಾಸಿಟಿವ್ ಬಂದಿದೆ. ಇವರೆಲ್ಲ ಮದುವೆಯೊಂದಕ್ಕೆ ಹೋಗಿ ಬಂದಿದ್ದರೆಂದು ತಿಳಿದುಬಂದಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ 115, ಖಾಸಗಿ ಆಸ್ಪತ್ರೆಯಲ್ಲಿ 88, ಹೋಮ್ ಐಸೋಲೇಷನ್ ನಲ್ಲಿ‌ 397 ಚಿಕಿತ್ಸೆ ಪಡೆಯುತ್ತಿದ್ದಾರೆ. 17 ಜನ ಟ್ರಿಯೇಜ್ ನಲ್ಲಿ‌ದ್ದಾರೆ.
ಕಾಲೇಜಿನಲ್ಲಿ ಕೊರೊನಾ ಪರೀಕ್ಷೆ ಮಾಡಲಾಗಿದ್ದು, 17 ವಿದ್ಯಾರ್ಥಿಗಳಿಗೆ ಹಾಗೂ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
2,965 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, 2,326 ವರದಿ ನೆಗೆಟಿವ್ ಬಂದಿವೆ.
ತಾಲೂಕುವಾರು ವರದಿ | ಶಿವಮೊಗ್ಗ 32, ಭದ್ರಾವತಿ 41, ಶಿಕಾರಿಪುರ 3, ತೀರ್ಥಹಳ್ಳಿ 17, ಸೊರಬ 1, ಸಾಗರ 23, ಹೊಸನಗರ 5 ಹಾಗೂ ಹೊರ ಜಿಲ್ಲೆಯ 2 ಪ್ರಕರಣ ಪತ್ತೆಯಾಗಿವೆ.

error: Content is protected !!