38 ವರ್ಷದ ವ್ಯಕ್ತಿಯನ್ನು ಬಲಿ ಪಡೆದ ಕೊರೊನಾ, ಎರಡು ಸಾವಿರ ಸನಿಹ ಆ್ಯಕ್ಟಿವ್ ಕೇಸ್

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಇಬ್ಬರನ್ನು ಕೊರೊನಾ ಬಲಿ ಪಡೆದಿದೆ. 38 ಹಾಗೂ 45 ವರ್ಷದ ಇಬ್ಬರು ಪುರುಷರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ‌ ಇದುವರೆಗೆ ಕೊರೊನಾ ಮಹಾಮಾರಿಯಿಂದ 366 ಜನ ಮೃತಪಟ್ಟಿದ್ದಾರೆ.

READ | ‘ರೆಮಿಡಿಸಿವರ್ ಪಡೆದವರೆಲ್ಲ ಬದುಕುತ್ತಾರೆಂಬ ಭ್ರಮೆ ಬೇಡ, ಶಿವಮೊಗ್ಗದಲ್ಲಿ ಈ ಇಂಜೆಕ್ಷನ್ ತೆಗೆದುಕೊಂಡ ಹಲವರು ಮೃತಪಟ್ಟಿದ್ದಾರೆ’

ಮಂಗಳವಾರ 11 ಕಾಲೇಜು ವಿದ್ಯಾರ್ಥಿಗಳು, 8 ಸಿಬ್ಬಂದಿ‌ ಸೇರಿ 388 ಜನರಲ್ಲಿ ಕೊರೊನಾ‌ ಸೋಂಕು‌ ದೃಢಪಟ್ಟಿದೆ ಹಾಗೂ 311 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
1,991 ಸಕ್ರಿಯ ಪ್ರಕರಣ | ಜಿಲ್ಲೆಯಲ್ಲಿ ಒಟ್ಟು 1,991 ಸಕ್ರಿಯ ಪ್ರಕರಣಗಳಿವೆ. ಅವರು ಮೆಗ್ಗಾನ್ ಆಸ್ಪತ್ರೆಯಲ್ಲಿ 316, ಕೋವಿಡ್‌ ಕೇರ್‌ ಸೆಂಟರ್‌ 8, ಖಾಸಗಿ ಆಸ್ಪತ್ರೆ 231, ಹೋಮ್‌ ಐಸೋಲೇಷನ್‌ ನಲ್ಲಿ 1,397 ಹಾಗೂ ಟ್ರಿಯೇಜ್‌ ಕೇಂದ್ರದಲ್ಲಿ 39 ಇದ್ದಾರೆ.
ತಾಲೂಕುವಾರು ವರದಿ‌ | ಶಿವಮೊಗ್ಗ 152, ಭದ್ರಾವತಿ 67, ಶಿಕಾರಿಪುರ 13, ತೀರ್ಥಹಳ್ಳಿ 23, ಸೊರಬ 17, ಸಾಗರ 53, ಹೊಸನಗರ 51, ಹೊರ ಜಿಲ್ಲೆಯ 12 ಪ್ರಕರಣಗಳು ಕಂಡುಬಂದಿವೆ.

error: Content is protected !!