ಶಿವಮೊಗ್ಗದಲ್ಲಿ ಲಭ್ಯವಿರುವ ಕೊರೊನಾ ಲಸಿಕೆ ಪ್ರಮಾಣವೆಷ್ಟು? ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾಡಿಕೊಂಡಿರುವ ಸಿದ್ಧತೆಗಳೇನು? ಬಸ್, ರೈಲು ನಿಲ್ದಾಣದಲ್ಲಿ ಟೆಸ್ಟಿಂಗ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಗೆ 11,560 ಕೋವ್ಯಾಕ್ಸಿನ್ ಸರಬರಾಜಾಗಿದ್ದು, 4,200 ಖರ್ಚಾಗಿದೆ. 12,8000 ಕೋವಿಶೀಲ್ಡ್ ಸರಬರಾಜಾಗಿದ್ದು 91,904 ಬಳಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.

READ | ವಾರದಿಂದ ಏರುತ್ತಿದೆ ಕೊರೊನಾ, ಈ ನಿಯಮ ಪಾಲಿಸಿದಿದ್ದರೆ ಬೀಳುತ್ತೆ ದಂಡ, ಜಿಲ್ಲಾಡಳಿತ ಖಡಕ್ ವಾರ್ನಿಂಗ್

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಒಟ್ಟು 173 ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಉಪ ಕೇಂದ್ರಗಳು, ಪಿ.ಎಚ್.ಸಿ, ಸಿ.ಎಚ್.ಸಿ, ತಾಲೂಕು ಆಸ್ಪತ್ರೆ, ಸಿಮ್ಸ್, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ತಮ್ಮ ಗುರುತಿನ ಚೀಟಿಯೊಂದಿಗೆ ತೆರಳಿ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಮೂಲಸೌಕರ್ಯ ಮೇಲ್ದರ್ಜೆಗೆ: ಪ್ರಸ್ತುತ ಕೋವಿಡ್ ಪ್ರಕರಣಗಳನ್ನು ಎದುರಿಸಲು ಜಿಲ್ಲಾಡಳಿತ ಎಲ್ಲ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಸುಸಜ್ಜಿತ ಐಸಿಯು, 11 ಸಾವಿರ ಕೆ.ಎಲ್. ಆಕ್ಸಿಜನ್ ಘಟಕ ಮಾತ್ರವಲ್ಲದೆ ಹೆಚ್ಚುವರಿಯಾಗಿ 6 ಸಾವಿರ ಕೆ.ಎಲ್. ಘಟಕವನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಎಪಿಎಂಸಿಯಂತಹ ಸ್ಥಳಗಳಲ್ಲಿ ರ್ಯಾಂಡಮ್ ಆಗಿ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

READ | ಮಲೆನಾಡಿನ ಭೂ ಕುಸಿತದ ಫೈನಲ್ ರಿಪೋರ್ಟ್ ಸಿಎಂಗೆ ಸಲ್ಲಿಕೆ, ಯಡಿಯೂರಪ್ಪ ಹೇಳಿದ್ದೇನು?

ಕೊರೊನಾ ವಾರಿಯರ್ಸ್ ಗೆ ಲಸಿಕೆ | ಜಿಲ್ಲೆಯಲ್ಲಿ ಇದುವರೆಗೆ 18041 (ಶೇ.85) ಆರೋಗ್ಯ ಕಾರ್ಯಕರ್ತೆಯರಿಗೆ ಪ್ರಥಮ ಡೋಸ್ ಹಾಗೂ ಶೇ.53ರಷ್ಟು ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. ಶೇ.63ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಪ್ರಥಮ ಡೋಸ್, 60ವರ್ಷ ಮೇಲ್ಪಟ್ಟ 58814 ಮಂದಿಗೆ ಹಾಗೂ 45ವರ್ಷ ಮೇಲ್ಪಟ್ಟ 1470 ಮಂದಿಗೆ ಲಸಿಕೆ ನೀಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಡಿ.ಎಚ್.ಒ ಡಾ.ರಾಜೇಶ್ ಸುರಗೀಹಳ್ಳಿ ಉಪಸ್ಥಿತರಿದ್ದರು.

error: Content is protected !!