ಹುಣಸೋಡು ಸ್ಫೋಟ ಪ್ರಕರಣ | ಮಳೆಗಾಲದೊಳಗೆ ಪರಿಹಾರ ಕೊಡಿ, ಡಿಸಿ ಕಚೇರಿ ಮುಂದೆ ಏಕಾಂಗಿ ಧರಣಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣಸೋಡು ಸ್ಫೋಟ ಘಟನೆಯಲ್ಲಿ ಹಾನಿಗೆ ಒಳಗಾದವರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ನವ ಕರ್ನಾಟಕ ನಿರ್ಮಾಣ ವೇದಿಕೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

READ | ‘ಯುವರತ್ನ’ನಿಗೆ ಮಲೆನಾಡಿನಲ್ಲಿ ಭರ್ಜರಿ ರೆಸ್ಪಾನ್ಸ್, ಪವರ್ ಸ್ಟಾರ್ ಕಟೌಟಿಗೆ ಕ್ಷೀರಾಭಿಷೇಕ

ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಗೋ.ರಮೇಶ್ ಗೌಡ ಒಬ್ಬರೇ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಒಂದೆಡೆ ಸೇರುವಂತಿಲ್ಲ ಎಂಬ ನಿಯಮವಿರುವುದರಿಂದ ವೇದಿಕೆಯ ಇನ್ನುಳಿದ ಕಾರ್ಯಕರ್ತರು ಸಾಮಾಜಿಕ ಅಂತರದೊಂದಿಗೆ ಸಹಕಾರ ನೀಡಿದರು.
ಸ್ಫೋಟದಿಂದ ಹುಣಸೋಡು ಸುತ್ತಲಿನ ಪ್ರದೇಶಗಳಾದ ಹೊಸೂರು, ಅಬ್ಬಲಗೆರೆ, ಬಸವನಗಂಗೂರು, ಗೆಜ್ಜೇನಹಳ್ಳಿ, ಹನುಮಂತಪುರ, ಬೊಮ್ಮನಕಟ್ಟೆ ಗ್ರಾಮದ ಮನೆಗಳಿಗೆ ಹಾನಿಯಾಗಿದೆ. ಸಾಮಗ್ರಿಗಳು ಹಾಳಾಗಿವೆ. ಈ ಬಗ್ಗೆ ಕೂಡಲೇ ಪರಿಹಾರ ನೀಡಬೇಕು. ಮಳೆಗಾಲ ಆರಂಭಕ್ಕೆ ಮುನ್ನವೇ ಮನೆ ರಿಪೇರಿಗೆ ಅಗತ್ಯವಿರುವ ಹಣ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ವೇದಿಕೆಯ ಸಂತೋಷ್, ದೇವೇಂದ್ರಪ್ಪ, ನಾಗರಾಜ್, ನಯನಾ, ಫಯಾಜ್, ರಾಜು ಉಪಸ್ಥಿತರಿದ್ದರು.

error: Content is protected !!