ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಯುವತಿ ಸೇರಿ ಇಬ್ಬರಿಗೆ 8.40 ಲಕ್ಷ ರೂಪಾಯಿ ಮೋಸ (fraud) ಮಾಡಲಾಗಿದೆ.
ಹಣ ಡಬಲ್ (money doubling) ಮಾಡುವುದಾಗಿ ನಂಬಿಸಿ ಯುವಕನೊಬ್ಬನಿಂದ 4.50 ಲಕ್ಷ ರೂಪಾಯಿ ಹಾಗೂ ಆನ್ಲೈನ್ (online) ನಲ್ಲಿ ಉದ್ಯೋಗ (job)ಅರಸುತಿದ್ದ ಯುವತಿಗೆ 3.90 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. ಎರಡೂ ಪ್ರಕರಣಗಳು ಸೇರಿ ಒಟ್ಟು 8.40 ಲಕ್ಷ ರೂ. ಮೋಸ ಮಾಡಲಾಗಿದೆ.
READ | ಶಿವಮೊಗ್ಗಕ್ಕೂ ಕಾಲಿಟ್ಟ ಓಮಿಕ್ರಾನ್ ವೈರಸ್ ಸೋಂಕು
ಹಣ ದ್ವಿಗುಣದ ಆಮೀಷಕ್ಕೆ ಒಳಗಾದ ಯುವಕ
ಯುವಕನೊಬ್ಬನ ಮೊಬೈಲ್ ನಲ್ಲಿಯ ಟೆಲಿಗ್ರಾಂ(telegram)ಗೆ ಲಿಂಕ್ ವೊಂದು ಬಂದಿದೆ. ಅದನ್ನು ಒತ್ತಿದರೆ ಹಣ ದುಪ್ಪಟ್ಟು ಆಗುತ್ತದೆ ಎಂದು ಹೇಳಲಾಗಿತ್ತು. ಮೊದಲು 100 ರೂ. ಹಾಕಿದ್ದಾನೆ. ಅದಕ್ಕೆ 285 ರೂ. ಬಂದಿದೆ. ಹೆಚ್ಚು ಹಣ ನೀಡಿದರೆ ಹೆಚ್ಚು ಹಣ ಬರುತ್ತದೆಂದು ಹೇಳಿದ್ದನ್ನು ನಂಬಿ ತನ್ನ ಹಾಗೂ ತಾಯಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಂತ ಹಂತವಾಗಿ ಹಾಕಿದ್ದಾನೆ. ಹಣ ದ್ವಿಗುಣವಾಗಿಲ್ಲ. ಜೊತೆಗೆ, ಹಾಕಲಾಗಿದ್ದ ಹಣವೂ ವಾಪಸ್ ಬಂದಿಲ್ಲ. ಇದರಿಂದ ಆತಂಕಗೊಂಡ ಯುವಕ ದೂರು ನೀಡಿದ್ದಾನೆ.
ಉದ್ಯೋಗದ ಹೆಸರಿನಲ್ಲಿ ಮೋಸ
ಯುವತಿಯೊಬ್ಬಳು ಆನ್ಲೈನ್ ನಲ್ಲಿ ಉದ್ಯೋಗ ಅರಸುತಿದ್ದು, ಈಕೆಯ ವಾಟ್ಸಾಪ್ ಸಂಖ್ಯೆಗೆ ಅಪರಿಚಿತ ನಂಬರಿನಿಂದ ಸಂದೇಶವೊಂದು ಬಂದಿದೆ. ಚಾಟಿಂಗ್ ಮಾಡಿದ್ದು, ಚಾಟಿಂಗ್ ಮಾಡುತ್ತಿದ್ದವರು ವಿವಿಧ ಟಾಸ್ಕ್ ನೀಡಿದ್ದಾರೆ. ಆ ಮೂಲಕ ಹಂತ ಹಂತವಾಗಿ ಹಣ ಹಾಕಿ ಮೋಸ ಹೋಗಿದ್ದಾರೆ. ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆ (cyber police station) ಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/12/05/the-incident-has-occurred-in-shimoga-where-the-man-fraud-in-the-name-of-mudra-yojana/