ಖಾಕಿ ಮಿಂಚಿನ ಕಾರ್ಯಾಚರಣೆ, ಮಾಸ್ಕ್ ಧರಿಸದ್ದಕ್ಕೆ 80,800 ರೂ. ದಂಡ, ಬಸ್ಸಿನಲ್ಲೂ ಬಿತ್ತು ದಂಡ, ಯಾವ ತಾಲೂಕಿನಲ್ಲಿ ಎಷ್ಟು?

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಪೊಲೀಸ್ ಇಲಾಖೆ ವೀಕೆಂಡ್ ನಲ್ಲಿ ಮಿಂಚಿನ ಕಾರ್ಯಾಚರಣೆ ಮಾಡಿದ್ದು, ಭಾನುವಾರವೊಂದೇ ದಿನ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಜನರಿಂದ 80,800 ರೂಪಾಯಿ ದಂಡ ವಸೂಲಿ ಮಾಡಿದೆ.

READ | ನೀವು ವಾಟ್ಸಾಪ್ ಬಳಕೆದಾರರೆ, ಹಾಗಾದರೆ ಇದನ್ನು ಒಮ್ಮೆ ಓದಲೇಬೇಕು

ಕೊರೊನಾ ಪ್ರಕರಣದಲ್ಲಿ ಏರಿಕೆ ಕಂಡುಬರುತ್ತಿದ್ದು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರ ಸಾರದವಜನಿಕ ಪ್ರದೇಶದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದೆ. ಅದನ್ನು ಉಲ್ಲಂಘಿಸಿದವರಿಗೆ ಇಂದು ಖಾಕಿ ಬಿಸಿ ಮುಟ್ಟಿಸಿದೆ.

517 ಪ್ರಕರಣ ದಾಖಲಿಸಿ ವಾರ್ನಿಂಗ್ ನೀಡಿದೆ. ನಗರದ ಪ್ರಮುಖ ರಸ್ತೆ, ಜನನಿಬಿಡ ಪ್ರದೇಶ, ವೃತ್ತಗಳಲ್ಲಿ ಮೊಕ್ಕಾಂ ಹೂಡಿದ್ದ ಪೊಲೀಸರು ಮಾಸ್ಕ್ ಧರಿಸದೇ ಬಂದವರಿಗೆ ಶಾಕ್ ನೀಡಿದ್ದಾರೆ.
ಮಾರ್ಕೆಟ್, ವೀಕೆಂಡ್ ಟ್ರಿಪ್ ಗೋಸ್ಕರ ಕುಟುಂಬದೊಂದಿಗೆ ಹೊರ ಬಂದವರಿಗೂ ದಂಡ ವಿಧಿಸಲಾಗಿದೆ.
ಬಸ್ಸಿನಲ್ಲೂ ನಡೀತು ಪರಿಶೀಲನೆ | ಸಾರ್ವಜನಿಕರು ಬಸ್ಸಿನಲ್ಲಿ ಮಾಸ್ಕ್ ಧರಿಸುವುದಕ್ಕೆ ಉಪೇಕ್ಷೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಖಾಸಗಿ ಬಸ್ ಗಳಲ್ಲಿ ಪರಿಶೀಲನೆ ನಡೆಸಲಾಯಿತು.
ತಾಲೂಕುವಾರು ದಂಡದ ಮಾಹಿತಿ

ತಾಲೂಕು ಪ್ರಕರಣ ದಂಡ (ರೂ.ಗಳಲ್ಲಿ)
ಶಿವಮೊಗ್ಗ 285 57,600
ಶಿಕಾರಿಪುರ 120 12,000
ಭದ್ರಾವತಿ 26 2,600
ಸಾಗರ 40 4,000
ತೀರ್ಥಹಳ್ಳಿ 46 4,600
ಒಟ್ಟು 517 80,800

https://www.suddikanaja.com/2021/03/31/fine-on-not-wearing-mask-by-shivamogga-police/

error: Content is protected !!