ಮಧ್ಯಾಹ್ನದಿಂದಲೇ ಗಾಂಧಿ ಬಜಾರ್ ಬಂದ್! ಶಿವಮೊಗ್ಗ ನಗರ ಕಂಪ್ಲೀಟ್ ಬಂದ್, ಪ್ರಸ್ತುತ ಏನೇನು ಲಭ್ಯವಿದೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಹೊಸ ಮಾರ್ಗಸೂಚಿ ಅನ್ವಯ ಅಗತ್ಯ ವಸ್ತುಗಳ ಹೊರತಾದ ಎಲ್ಲ ಅಂಗಡಿಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚನೆಯಂತೆ ಗಾಂಧಿ ಬಜಾರ್ ಆದಿಯಾಗಿ ಎಲ್ಲ ಅಂಗಡಿಗಳನ್ನು ಪೊಲೀಸರು ಗುರುವಾರ ಮಧ್ಯಾಹ್ನದಿಂದಲೇ ಬಂದ್ ಮಾಡಿಸಿದರು.
ನೆಹರೂ ರಸ್ತೆ, ಬಿ.ಎಚ್.ರಸ್ತೆ, ಎಲ್.ಎಲ್.ಆರ್ ರಸ್ತೆ, ದುರ್ಗಿಗುಡಿ ರಸ್ತೆ, ಶಂಕರ ಮಠ ರಸ್ತೆ, ಲಕ್ಷ್ಮೀ ಟಾಕೀಸ್ ಸೇರಿ ಹಲವೆಡೆ ಅಂಗಡಿಗಳನ್ನು ಪೊಲೀಸರು ಬಂದ್ ಮಾಡುವಂತೆ ಸೂಚಿಸಿದರು. ಒಂದು ಸುತ್ತು ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಿ ಬಳಿಕ ಅಂಗಡಿಗಳನ್ನು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿದರು.
ಅರ್ಧ ಶಟರ್ ತೆರೆದಿಟ್ಟು ವ್ಯಾಪಾರ | ಪೊಲೀಸರು ಬಲಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸಿದರೂ ಕೆಲವೆಡೆ ಅರ್ಧ ಶಟರ್ ತೆರೆದಿಟ್ಟು ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡುಬರುತ್ತಿದೆ.
ಪ್ರಸ್ತುತ ದಿನಸಿ ಅಂಗಡಿ, ಮೆಡಿಕಲ್, ಬಸ್ ಸೇವೆ ಹೊರತಾಗಿ ಎಲ್ಲವೂ ಬಂದ್ ಇದೆ.

error: Content is protected !!