ಮದುವೆಯ ದಿನವೇ ವರನ ಬಲಿ ಪಡೆದ ಕೊರೊನಾ

 

 

ಸುದ್ದಿ ಕಣಜ.ಕಾಂ
ಚಿಕ್ಕಮಗಳೂರು: ಕೊರೊನಾ ಮಹಾಮಾರಿ ಹಸೆಮಣೆ ಏರಬೇಕಿದ್ದ ವರನನ್ನೇ ಬಲಿ ಪಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಪೃಥ್ವಿರಾಜ್ (32) ಮೃತ ಯುವಕ. ಗುರುವಾರ ಈತನ ಮದುವೆ ಇತ್ತು. ಆದರೆ, ಕ್ರೂರ ಕೊರೊನಾ ಈತನನ್ನು ಬಲಿ ಪಡೆದಿದೆ.

READ | ಕೊರೊನಾಗೆ ಭದ್ರಾವತಿ ವ್ಯಕ್ತಿ ಬಲಿ, ಶಿವಮೊಗ್ಗದಲ್ಲಿಂದು ದಾಖಲೆಯ ಕೊರೊನಾ ಪ್ರಕರಣ

ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಈತ ಕೆಲಸ ಮಾಡುತ್ತಿದ್ದ. ತನ್ನ ಮದುವೆ ತಯಾರಿಗೆ ಬಂದಿದ್ದ ಪೃಥ್ವಿ ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಮದುವೆ ವಾರವಿರುವಾಗ ಬೆಂಗಳೂರಿನಿಂದ ತಮ್ಮೂರಿಗೆ ಬಂದಿದ್ದ ಈತನ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೊರೊನಾ ಪರೀಕ್ಷೆ ಕೂಡ ಮಾಡಲಾಗಿದೆ. ಆದರೆ, ಎಲ್ಲವೂ ಸರಿಯಿತ್ತು. ವರದಿ ನೆಗೆಟಿವ್ ಬಂದಿತ್ತು. ಹೊಟ್ಟೆ ನೋವು ಮಾತ್ರ ಕಡಿಮೆಯಾಗಿಲ್ಲ. ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿದೆ.
ಇಲ್ಲಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ. ಚಿಕಿತ್ಸೆ ಕೂಡ ನೀಡಲಾಗುತಿತ್ತು. ಆದರೆ, ಉಸಿರಾಟದ ತೊಂದರೆ ಕಾಣಿಸಿಕೊಂಡು ಬುಧವಾರ ಮೃತಪಟ್ಟಿದ್ದಾರೆ.

https://www.suddikanaja.com/2021/01/28/khandya-cricket-tourney-cancelled-in-chikkamagaluru/

error: Content is protected !!