ಕೊರೊನಾಗೆ ಹೊನ್ನಾಳಿ ವ್ಯಕ್ತಿ ಸಾವು, ತ್ರಿ ಶತಕ ದಾಟಿದ ನಂಜು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾಗೆ ಸಾಯುವವರ ಸಂಖ್ಯೆ ಮುಂದುವರಿದಿದೆ. ಸೋಮವಾರ ಹೊನ್ನಾಳಿಯ 72 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

READ | 14 ದಿನ‌ ಕರ್ನಾಟಕ ಲಾಕ್‌, ಯಾವಾಗಿಂದ ಹೊಸ ಮಾರ್ಗಸೂಚಿ ಅನ್ವಯ, ಏನಿರುತ್ತೆ, ಏನಿರಲ್ಲ

ಜಿಲ್ಲೆಯಲ್ಲಿ ಇಂದು 20 ವಿದ್ಯಾರ್ಥಿಗಳು, 6 ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ 347 ಮಂದಿಗೆ ಕೊರೊನಾ ಸೋಂಕು ತಗುಲಿದೆ. 159 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರಿಂದ‌ ಅವರನ್ನು ಬಿಡುಗಡೆ ಮಾಡಲಾಗಿದೆ.
3,250 ಮಾದರಿ ಸಂಗ್ರಹಿಸಲಾಗಿದೆ‌. 1,877 ಜನರ ವರದಿಗಳು ನೆಗೆಟಿವ್‌ ಇವೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 335 ಜನ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 212, ಹೋಮ್‌ ಐಸೋಲೇಷನ್‌ನಲ್ಲಿ 1,343, ಕೋವಿಡ್ ಕೇರ್ ಸೆಂಟರ್ ನಲ್ಲಿ ಇಬ್ಬರು ಸೇರಿ ಟ್ರಿಯೇಜ್ ನಲ್ಲಿ 22 ಮಂದಿ ಸೇರಿ ಒಟ್ಟು 1,914 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
ತಾಲೂಕುವಾರು ವರದಿ | ಶಿವಮೊಗ್ಗ 146, ಭದ್ರಾವತಿ 44, ಶಿಕಾರಿಪುರ 42, ತೀರ್ಥಹಳ್ಳಿ 4, ಸೊರಬ 18, ಸಾಗರ 37, ಹೊಸನಗರ 40, ಹೊರ ಜಿಲ್ಲೆಯ 16 ಪ್ರಕರಣ ಪತ್ತೆಯಾಗಿವೆ.

https://www.suddikanaja.com/2021/04/20/bhadravathi-man-dead-due-to-covid/

error: Content is protected !!